Belagavi NewsBelgaum NewsKannada NewsKarnataka NewsTravel

*ಕುಂಭಮೇಳಕ್ಕೆ ಲಕ್ನೋ ಜಂಕ್ಷನ್ ಗೆ ವಿಶೇಷ ರೈಲು*

ಪ್ರಗತಿವಾಹಿನಿ ಸುದ್ದಿ: ಕುಂಭಮೇಳದಲ್ಲಿ ಭಾಗವಹಿಸುವ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಪೂರೈಸಲು ನೈಋತ್ಯ ರೈಲ್ವೆ ಏಕಮುಖ ವಿಶೇಷ ರೈಲನ್ನು ಓಡಿಸಲಿದೆ. 

ರೈಲು ಸಂಖ್ಯೆ 06216 ಮೈಸೂರು-ಲಕ್ನೋ ಜಂಕ್ಷನ್ ಏಕ ಮುಖ ಸ್ಪೆಷಲ್ ಎಕ್ಸ್ ಪ್ರೆಸ್ ಡಿಸೆಂಬರ್ 29, 2024 ರ ಭಾನುವಾರ 00:30 ಗಂಟೆಗೆ ಮೈಸೂರಿನಿಂದ ಹೊರಟು ಡಿಸೆಂಬರ್ 31, 2024 ರ ಮಂಗಳವಾರ 04:00 ಗಂಟೆಗೆ ಲಕ್ನೋ ಜಂಕ್ಷನ್ ತಲುಪಲಿದೆ.

 ಈ ರೈಲು ಮಂಡ್ಯ, ಕೆಎಸ್ಆರ್ ಬೆಂಗಳೂರು, ಯಶವಂತಪುರ ಜಂಕ್ಷನ್, ತುಮಕೂರು, ಅರಸೀಕೆರೆ ಜಂಕ್ಷನ್, ಕಡೂರು, ಚಿಕ್ಕಜಾಜೂರು ಜಂಕ್ಷನ್, ದಾವಣಗೆರೆ, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ ಜಂಕ್ಷನ್, ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಜ್ ಜಂಕ್ಷನ್, ಸಾಂಗ್ಲಿ, ಕರಡ್, ಪುಣೆ ಜಂಕ್ಷನ್, ದೌಂಡ್ ಕಾರ್ಡ್ ಲೈನ್, ಅಹ್ಮದ್ನಗರ, ಮನ್ಮಾಡ್ ಜಂಕ್ಷನ್, ಭೂಸಾವಲ್ ಜಂಕ್ಷನ್, ಖಾಂಡ್ವಾ, ತಲ್ವಾಡಿಯಾ, ಭೋಪಾಲ್, ಖಾಂಡ್ವಾ, ತಲ್ವಾಡಿಯಾ, ಚನೇರಾ, ಖಾಂಡ್ವಾ, ತಲ್ವಾಡ್ಯ, ಚನೇರಾ, ಖಾಂಡ್ವಾ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಈ ರೈಲು 11 ಸೆಕೆಂಡ್ ಜನರಲ್ ಕ್ಲಾಸ್ ಬೋಗಿಗಳು, 07 ಸ್ಲೀಪರ್ ಕ್ಲಾಸ್ ಬೋಗಿಗಳು ಮತ್ತು 2 ಎಸ್ಎಲ್ಆರ್ / ಡಿ ಸೇರಿದಂತೆ 20 ಬೋಗಿಗಳನ್ನು ಒಳಗೊಂಡಿರುತ್ತದೆ.

ಈ ರೈಲಿನ ಪ್ರತಿ ನಿಲ್ದಾಣದ ಆಗಮನ/ನಿರ್ಗಮನ ಸಮಯ ತಿಳಿಯಲು ಪ್ರಯಾಣಿಕರು ಭಾರತೀಯ ರೈಲ್ವೆಯ ವೆಬ್ ಸೈಟ್ www.enquiry.indianrail.gov.in ನಲ್ಲಿ ಲಭ್ಯವಿದೆ ಅಥವಾ 139 ನಂಬರ್ ಗೆ  ಡಯಲ್ ಮಾಡಿ ಮಾಡಿ ಮಾಹಿತಿ ಪಡೆಯಬಹುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button