ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇತ್ತೀಚಿಗೆ ಅಪಘಾತದಲ್ಲಿ ಯೋಧರ ಸಾವಿನ ಪ್ರಕರಣಗಳು ಹೆಚ್ಚುತಿದ್ದು, ಬೆಳಗಾವಿ ತಾಲ್ಲೂಕಿನ ನಿಂಗೆನಟ್ಟಿ ಗ್ರಾಮದ ನಿವಾಸಿ ರವಿ ತಳವಾರ ವೀರಮರಣ ಹೊಂದಿದ್ದಾರೆ.
ನಾಗಾಲ್ಯಾಂಡ್‌ನ ಅಸ್ಸಾಂ ರೈಫಲ್ಸ್‌ನ 41 ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಬೆಳಗಾವಿ ತಾಲ್ಲೂಕಿನ ನಿಂಗೆನಟ್ಟಿ ಗ್ರಾಮದ ಸೈನಿಕ ಬುಧವಾರ ಬೆಳಗ್ಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬ ಸದಸ್ಯರ ಪ್ರಕಾರ, ರವಿ ತಳವಾರ ಪ್ರಯಾಣಿಸುತ್ತಿದ್ದ ವಾಹನವು ನಾಗಾಲ್ಯಾಂಡ್‌ನ ಘಾಟ್ ವಿಭಾಗದಲ್ಲಿ ಆಳವಾದ ಕಂದಕಕ್ಕೆ ಬಿದ್ದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಬೆಳಗ್ಗೆ ರಕ್ಷಣಾ ಅಧಿಕಾರಿಗಳಿಂದ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.
16 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ರವಿ, ಇನ್ನೆರಡು ವರ್ಷಗಳಲ್ಲಿ ನಿವೃತ್ತರಾಗುವ ನಿರೀಕ್ಷೆಯಿತ್ತು. ಮೃತ ಸೈನಿಕನಿಗೆ ಪತ್ನಿ ಶೀತಲ್ ತಳವಾರ, 11 ವರ್ಷದ ಮಗಳು ಮತ್ತು 10 ವರ್ಷದ ಮಗ ಇದ್ದಾರೆ. ರವಿ ಅವರ ಮೃತದೇಹ ಎರಡು ದಿನಗಳಲ್ಲಿ ಮನೆಗೆ ತಲುಪುವ ನಿರೀಕ್ಷೆಯಿದೆ. ರವಿ ಅವರ ಅಗಲಿಕೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ