ಪ್ರಗತಿವಾಹಿನಿ ಸುದ್ದಿ: ಕೋಟಿ ಕೋಟಿ ತೆರಿಗೆ ವಂಚನೆ ಪ್ರಕರಣಕ್ಕೆ ಬಂಧಿತನಾಗಿರುವ ಸುಕೇಶ್ ಅವರು ತೆರಿಗೆ ಅಣ ಪಾವತಿಸಿಸಲು ಸಿದ್ಧನಿದ್ದೇನೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.
ಸುಕೇಶ್ ಚಂದ್ರಶೇಖರ್ 2024-2025ನೇ ಸಾಲಿನಲ್ಲಿ 7,640 ಕೋಟಿ ರೂಪಾಯಿ ತೆರಿಗೆ ಪಾವತಿಸಬೇಕು. ಈಗ ಈ ಹಣ ಪಾವತಿಸಲು ಸಿದ್ದ ಇರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾನೆ. ಕೇಂದ್ರ ಸರ್ಕಾರದ ಸೂಕ್ತ ಯೋಜನೆಯಡಿ ತನ್ನ ವಿದೇಶಿ ಆದಾಯವನ್ನು ಘೋಷಿಸಿಕೊಳ್ಳಲು ಅವಕಾಶ ನೀಡುವಂತೆಯೂ ಮನವಿ ಮಾಡಿದ್ದಾನೆ. ಅಮೆರಿಕದ ನೆವಾಡಾ ಮತ್ತು ಬ್ರಿಟಿಷ್ ವರ್ಜಿನ್ ಐಲ್ಯಾಂಡ್ನಲ್ಲಿ ಎಲ್ಎಸ್ ಹೋಲ್ಡಿಂಗ್ಸ್ ಇಂಟರ್ನ್ಯಾಶನಲ್ ಹೆಸರಿನ ಆನ್ಲೈನ್/ಆಫ್ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಕಂಪನಿ ನಡೆಸುತ್ತಿರುವುದಾಗಿ ಆತ ಹೇಳಿಕೊಂಡಿದ್ದಾನೆ. 2016ರಿಂದಲೂ ಈ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. 2024ರಲ್ಲಿ 2.70 ಶತಕೋಟಿ ವಹಿವಾಟು ನಡೆಸಿವೆ. ಅಮೆರಿಕ, ಸ್ಪೇನ್, ಬ್ರಿಟನ್, ದುಬೈ ಮತ್ತು ಹಾಂಕಾಂಗ್ ನಲ್ಲಿಯೂ ಹೂಡಿಕೆ ಮಾಡಿದ್ದಾಗಿ ಆತ ಹೇಳಿಕೊಂಡಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ