Kannada NewsKarnataka News

ಬೆಳಗಾವಿ ಡಿಸ್ಟ್ರಿಕ್ಟ್ ಸರ್ಜನ್ ಹುಸೇನ್ ಸಾಬ್ ಖಾಜಿ ಸಸ್ಪೆಂಡ್ ಮಾಡಿ

https://www.youtube.com/watch?v=yo7sAZACgY8

https://www.youtube.com/watch?v=ERGpOwA8eLg

https://www.youtube.com/watch?v=fZJTGiQGgEU

https://www.youtube.com/watch?v=1vzSXzLGTIM

Home add -Advt

https://www.youtube.com/watch?v=O–IeML9gYo

https://www.youtube.com/watch?v=hLjOoXVdeK4

https://www.youtube.com/watch?v=r_QxkRgnWPs

https://www.youtube.com/watch?v=_t8AJf7xe8M

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಜಿಲ್ಲಾ ಆಸ್ಪತ್ರೆಯ ಡಿಸ್ಟ್ರಿಕ್ಟ್ ಸರ್ಜನ್ ಹುಸೇನ್ ಸಾಬ್ ಖಾಜಿ ಅವರಿಗೆ ನೋಟೀಸ್ ನೀಡುವುದಲ್ಲದೆ ಅವರನ್ನು ಅಮಾನತುಗೊಳಿಸಲು ಶಿಫಾರಸಸು ಮಾಡಬೇಕೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಬಿಮ್ಸ್ ನಿರ್ದೇಶಕ ಎಸ್.ಟಿ.ಕಳಸದ್ ಅವರಿಗೆ ಸೂಚಿಸಿದ್ದಾರೆ.

ಬುಧವಾರ ಜಿಲ್ಲಾ ಆಸ್ಪತ್ರೆಗೆ ಎರಡನೇ ಬಾರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಂಕರಗೌಡ ಪಾಟೀಲ ಅಲ್ಲಿನ ಸಿಬ್ಬಂದಿಗೆ ಪಾಠ ಮಾಡಿದರು. ನಾನು ಬರುತ್ತೇನೆಂದು ಎಲ್ಲ ವ್ಯವಸ್ಥೆ ಸರಿಪಡಿಸುವುದಕ್ಕೂ ನಿತ್ಯವೂ ಈ ಬಗ್ಗೆ ಗಮನಿಸುವುದಕ್ಕೂ ವ್ಯತ್ಯಾಸವಿದೆ. ಪೇಶ್ಂಟ್ಸ್ ಎಂದರೆ ಅವರಿಗೆ ಪೇಶನ್ಸ್ ಇರುವುದಿಲ್ಲ. ಅವರಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕು. ಸರಿಯಾದ ಚಿಕಿತ್ಸೆ ದೊರೆಯಬೇಕೆಂದೇ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತದೆ. ಅದು ಸರಿಯಾಗಿ ಬಳಕೆಯಾಗದಿದ್ದರೆ ಏನು ಪ್ರಯೋಜನ ಎಂದು ಎಸ್.ಟಿ.ಕಳಸದ್ ಅವರಲ್ಲಿ ಪ್ರಶ್ನಿಸಿದರು.

ಈ ಹಿಂದೆ ನಾನು ಬಂದಾಗ ಆಸ್ಪತ್ರೆಯ ಡಿಸ್ಟ್ರಿಕ್ಟ್ ಸರ್ಜನ್ ಹುಸೇನ್ ಸಾಬ್ ಖಾಜಿ ಮೇಲಧಿಕಾರಿಗಳ ವಿರುದ್ಧ ಸಾಕಷ್ಟು ದೂರು ಹೇಳಿದ್ದರು. ಆದರೆ ಇಂದು ನಾನು ಬರುತ್ತೇನೆಂದು ತಿಳಿದೂ ರಜೆ ಹಾಕಿ ತೆರಳಿದ್ದಾರೆ. ಅವರ ಬೇಜವಾಬ್ದಾರಿಯಿಂದಲೇ ಇಲ್ಲಿ ಅವ್ಯವಸ್ಥೆ ಹೆಚ್ಚಾಗಿದೆ. ಅವರಿಗೆ ಮೇಮೋ ಕಳಿಸಿ, ಜೊತೆಗೆ ಸಂಸ್ಪೆಂಡ್ ಮಾಡಲು ಶಿಫಾರಸ್ಸು ಮಾಡಿ. ನಾನು ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದು ಶಂಕರಗೌಡ ಪಾಟೀಲ ಹೇಳಿದರು.

ಶಂಕಗೌಡ ಪಾಟೀಲ ಭೇಟಿ ನೀಡುವ ವಿಷಯ ತಿಳಿದ ಕೂಡಲೇ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರು, ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು ಅಲ್ಲಿಗೆ ಧಾವಿಸಿದ್ದರು. ಆಸ್ಪತ್ರೆ ಕುರಿತು ದೂರುಗಳ ಸುರಿಮಳೆ ಸುರಿಸಿದರು. ಸಾಮಾಜಿಕ ಕಾರ್ಯಕರ್ತರಾದ ಶಿವಾಜಿ ಕಾಗಣಿಕರ್, ಶಾರದಾ ದಾಬಡೆ, ಎನ್.ಆರ್.ಲಾತೂರ್ ಸೇರಿದಂತೆ ಹಲವರು ಆಸ್ಪತ್ರೆಯ ಅವ್ಯವಸ್ಥೆ, ಅಲ್ಲಿ ಗುತ್ತಿಗೆದಾರರೊಂದಿಗೆ ಕಮಿಷನ್ ವ್ಯವಹಾರ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಟ್ಟರು.

ಕಳೆದ ಬಾರಿ ಭೇಟಿ ನೀಡಿದಾಗಿನದ್ದಕ್ಕಿಂತ ಸ್ವಲ್ಪ ಮಟ್ಟಿಗೆ ಸುಧಾರಣೆ ಕಾಣುತ್ತಿದೆ. ಆದರೆ ಇನ್ನೂ ಸಾಕಷ್ಟು ಸುಧಾರಣೆ ಆಗಬೇಕಿದೆ. ನಾನು ಆಗಾಗ ಭೇಟಿ ನೀಡುತ್ತೇನೆ. ಆಸ್ಪತ್ರೆಯಲ್ಲಿ ರಿಸೆಪ್ಶನ್ ಚೆಂಬರ್, ಯಾವ ಯಾವ ಸೌಲಭ್ಯವಿದೆ ಎನ್ನುವ ಮಾಹಿತ ಫಲಕ, ಯಾವ ಕೆಲಸಕ್ಕೆ ಎಲ್ಲಿ ಹೋಗಬೇಕು ಎನ್ನುವ ಮಾಹಿತಿ ಫಲಕಗಳನ್ನು ಎಲ್ಲೆಡೆ ಅಳವಡಿಸಬೇಕು. ಕೇವಲ ರೋಗಿಗಳಿಗೆ ದಂಡ ಹಾಕುವ ವಿಷಯದ ಫಲಕ ಮಾತ್ರ ಕಾಣುತ್ತಿದೆ. ಸರಕಾರದ ಉದ್ದೇಶವನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿಲ್ಲ ಎಂದು ಶಂಕರಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಆಸ್ಪತ್ರೆ ಹೆರಿಗೆ ವಾರ್ಡ್ ಗಳನ್ನು ಸಂಪೂರ್ಣ ಪರಿಶೀಲನೆ ನಡೆಸಿದ ಅವರು ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಆಸ್ಪತ್ರೆಯ ಕೊರತೆಗಳ ಕುರಿತು ಸಹ ಮಾಹಿತಿ ಪಡೆದ ಶಂಕರಗೌಡ, ಸಿಬ್ಬಂದಿ ನೇಮಕ, ಬೇರೆ ಬೇರೆ ಸೌಲಭ್ಯಗಳ ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲೂ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

 

Related Articles

Back to top button