ಪ್ರಗತಿವಾಹಿನಿ ಸುದ್ದಿ: ಇಂದು ಶಾಸಕಾಂಗ ಪಕ್ಷದ ಸಭೆ ಇದೆ, ದಲಿತ ಸಮುದಾಯದ ಎಲ್ಲಾ ಶಾಸಕರು ಇರುತ್ತಾರೆ ಈ ವೇಳೆ ಈ ಬಗ್ಗೆ ಮಾತನಾಡುತ್ತೇವೆ ಎಂದು ದಲಿತ ನಾಯಕರ ಡಿನ್ನರ್ ಮೀಟಿಂಗ್ ಪ್ರಸ್ತಾಪದ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಇಂದು ಶಾಸಕಾಂಗ ಪಕ್ಷದ ಸಭೆ ಇದೆ, ಆ ಸಭೆಯಲ್ಲಿ ದಲಿತ ಸಮುದಾಯದ ಎಲ್ಲಾ ಶಾಸಕರು ಇರುತ್ತಾರೆ. ಈ ಹಿನ್ನಲೆ ಆ ಸಭೆಯಲ್ಲಿ ಚರ್ಚೆ ಆಗಬೇಕಲ್ಲಾ ಈ ಬಗ್ಗೆ ಪರಮೇಶ್ವರ್ ಅವರಿಗೂ ಹೇಳ್ತಿನಿ ಎಂದು ಜಾರಕಿ ಹೊಳಿ ಹೇಳಿದರು.
ಇದೇ ವೇಳೆ ಕಂಟ್ರಾಕ್ಟರ್ ಅಸೋಸಿಯೇಶನ್ ದೂರು ವಿಚಾರದ ಬಗ್ಗೆ ಮಾತನಾಡಿದ್ದು, ಹಿಂದೆ ಬಿಜೆಪಿ ಸರ್ಕಾರ ಮಂಜೂರು ಮಾಡಿದೆ, ಈಗಾಗಲೇ 32 ಸಾವಿರ ಕೋಟಿ ಹಣ ಬಾಕಿ ಉಳಿದಿದ್ದು, ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಜಾರಕಿ ಹೊಳಿ ಹೇಳಿದರು.
ಅಸೋಸಿಯೇಶನ್ ನೀಡಿದ ದೂರನ್ನು ನಮ್ಮ ಇಲಾಖೆ ಸಭೆ ಮಾಡಿದ್ದೇವೆ, ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದೇವೆ. ಜೊತೆಗೆ ಅಸೋಸಿಯೇಷನ್ ಬೇಡಿಕೆ ಬಗ್ಗೆ ಚರ್ಚೆಯಾಗಿದೆ ಎಂದರು.
ಜೊತೆಗೆ ಕೆಪಿಸಿಸಿ ಅಧ್ಯಕ್ಷರ ನೇಮಕ ಜಟಾಪಟಿ ವಿಚಾರದ ಬಗ್ಗೆ ಕೂಡ ಮಾತನಾಡಿದ ಜಾರಕಿಹೊಳಿ ನಮ್ಮಲ್ಲಿ ಅಧ್ಯಕ್ಷರ ನೇಮಕ ಜಟಾಪಟಿ ಮಾಡುವಂತ ಪ್ರಸ್ತಾವನೆ ಇಲ್ಲ, ಪಕ್ಷದ ವಿಚಾರದಲ್ಲಿ ತಿಕ್ಕಾಟ ಮಾಡುವವರು ಯಾರು ಎಂದು ಪ್ರಶ್ನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ