Karnataka News

*ಸಿಎಂ ಸಿದ್ದರಾಮಯ್ಯ ಹೆಸರಿನಲ್ಲಿ ಸೈಬರ್ ವಂಚನೆ*

ಪ್ರಗತಿವಾಹಿನಿ ಸುದ್ದಿ : ಜನಸಾಮಾನ್ಯರನ್ನು ವಂಚಿಸಲು ಸೈಬರ್ ವಂಚಕರು ಒಂದು ಹೆಜ್ಜೆ ಮುಂದಿಟ್ಟಿದ್ದು, ಇದೀಗ ಸಿಎಂ ಸಿದ್ದರಾಮಯ್ಯ ಅವರ ಫೋಟೋ ಬಳಸಿಕೊಂಡು ವಂಚನೆಗೆ ಇಳಿದಿರುವ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಹೊಸ ವರ್ಷದ ಸಂಭ್ರಮದಲ್ಲಿ ಸಿದ್ದರಾಮಯ್ಯ ಎಲ್ಲರಿಗೂ 3 ತಿಂಗಳ ರೂ.749ರ ರಿಚಾರ್ಜ್ ಅನ್ನು ಸಂಪೂರ್ಣವಾಗಿ ಉಚಿತ ನೀಡುತ್ತಿದ್ದಾರೆ. ಆದ್ದರಿಂದ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ರಿಚಾರ್ಜ್‌ನ ಪ್ರಯೋಜನ ಪಡೆದುಕೊಳ್ಳಿ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಎಂದು ಸಿಎಂ ಫೋಟೋ ಜೊತೆ ಲಿಂಕ್ ವೊಂದನ್ನು ವಾಟ್ಸಪ್‌ಗಳಲ್ಲಿ ಹರಿಬಿಟ್ಟಿದ್ದಾರೆ.

ಈ ಫೇಕ್ ಲಿಂಕ್ ಓಪನ್ ಮಾಡಿದ ತಕ್ಷಣ, ನಿಮ್ಮ ಖಾತೆಯಲ್ಲಿನ ಹಣವು ಫೋನ್ ಪೇ ಮೂಲಕ ರೂ.749 ವಂಚಕರ ಖಾತೆಗೆ ತಾನಾಗಿಯೇ ವರ್ಗಾವಣೆಯಾಗುತ್ತದೆ. ಮೊಬೈಲ್ ರಿಚಾರ್ಜ್ ಹೆಸರಲ್ಲಿ ವಂಚಕರು ಫೇಕ್ ಲಿಂಕ್ ಕ್ರಿಯೇಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಎಚ್ಚರವಹಿಸುವ ಅಗತ್ಯವಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button