ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಘಟಕಗಳನ್ನು ಹೊಂದಿದ್ದು, ಹತ್ತು ಸಾವಿರಕ್ಕೂ ಹೆಚ್ಚು ಸಕ್ರೀಯ ಸದಸ್ಯರುಗಳಿದ್ದಾರೆ. ಈ ಬಾರಿಯೂ ರಾಜ್ಯ ಸಮ್ಮೇಳನದಲ್ಲಿ ಉತ್ತಮ ಸಾಧನೆ ಮಾಡಿರುವ ತಾಲೂಕು ಮತ್ತು ಜಿಲ್ಲಾ ಸಂಘಗಳಿಗೆ ಪ್ರಶಸ್ತಿ ನೀಡಲಾಗುವುದು. ಇದೇ ಸಂದರ್ಭದಲ್ಲಿ ಹೊಸದಾಗಿ ಪ್ರಾರಂಭಿಸಿರುವ ದತ್ತಿ ಪ್ರಶಸ್ತಿಗಳಿಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಗುವುದು.
ತುಮಕೂರಿನಲ್ಲಿ ಜನವರಿ 18 ಮತ್ತು 19 ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಅವರು ತಿಳಿಸಿದ್ದಾರೆ.
ಉತ್ತಮ ಸಾಧನೆಗೈದ ಜಿಲ್ಲಾ ಸಂಘಗಳು:
1.ಉಡುಪಿ
(ಸಂಘದ ರಜತ ಮಹೋತ್ಸವ ಹಿನ್ನೆಲೆ ಮತ್ತು ಕಾರ್ಯ ಚಟುವಟಿಕೆ ಪರಿಗಣಿಸಲಾಗಿದೆ)
2.ತುಮಕೂರು
(ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ ಆಯೋಜನೆ ಮತ್ತು ನಿರಂತರ ಕಾರ್ಯ ಚಟುವಟಿಕೆ)
3.ಉತ್ತರ ಕನ್ನಡ
(ಸಂಘದ ಸುವರ್ಣ ಸಂಭ್ರಮ ಹಿನ್ನೆಲೆ ಮತ್ತು ಕಾರ್ಯಚಟುವಟಿಕೆ ಪರಿಗಣಿಸಿದೆ)
ಉತ್ತಮ ಸಾಧನೆಗೈದ ತಾಲೂಕು ಸಂಘಗಳು:
ಸೇಡಂ- ಕಲಬುರ್ಗಿ ಜಿಲ್ಲೆ
ಜಗಳೂರು- ದಾವಣಗೆರೆ ಜಿಲ್ಲೆ
ಕುಶಾಲನಗರ-ಕೊಡಗು ಜಿಲ್ಲೆ
ನಾಗಮಂಗಲ-ಮಂಡ್ಯ
ಹೊಸದಾಗಿ ಪ್ರಾರಂಭವಾದ ದತ್ತಿ ಪ್ರಶಸ್ತಿಗಳು ಮತ್ತು ಆಯ್ಕೆಯಾದವರ ವಿವರ:
ಗಣೇಶ್.ಜಿ. ದತ್ತಿ ಪ್ರಶಸ್ತಿ:
ಮೂರ್ತಿ, ಜಿ.ಆರ್. (ಮೀಸೆ ಮೂರ್ತಿ), ಹಿರಿಯ ಪತ್ರಕರ್ತರು
ಕೆ.ಪ್ರಹ್ಲಾದರಾವ್ (ಮಂಡ್ಯ) ದತ್ತಿ ಪ್ರಶಸ್ತಿ:
ಮಹಾಬಲ ಸೀತಾಳಭಾವಿ, ಸಂಪಾದಕರು, ಸಂಯುಕ್ತ ಕರ್ನಾಟಕ
ಗರುಡನಗಿರಿ ನಾಗರಾಜ್ ಪ್ರಶಸ್ತಿ:
ಸದಾನಂದ ಹೆಗಡೆ, ಸ್ಥಾನಿಕ ಸಂಪಾದಕರು, ವಿಜಯ ಕರ್ನಾಟಕ
ಗುರುಲಿಂಗಸ್ವಾಮಿ ಹೋಳಿಮಠ ಪ್ರಶಸ್ತಿ:
ಎಚ್.ವಿ.ಸೋಮಶೇಖರ್, ಹಿರಿಯ ಪತ್ರಕರ್ತರು, ಚಿಕ್ಕಬಳ್ಳಾಪುರ
ಅತ್ಯುತ್ತಮ ಮುಖಪುಟ:
ವಿಜಯ ಕರ್ನಾಟಕ (ಬಜೆಟ್ ಪುಟ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ