ಪ್ರಗತಿವಾಹಿನಿ ಸುದ್ದಿ : ಎಟಿಎಂ ಕಾವಲುಗಾರನನ್ನು ಕೊಂದು ಹಣ ದೋಚಿದ ಬೀದರ್ ಎಟಿಎಂ ದರೋಡೆ ಪ್ರಕರಣದ ಬಗ್ಗೆ ಗೃಹಸಚಿವ ಜಿ. ಪರಮೇಶ್ವರ್ ಮಹತ್ವದ ಮಾಹಿತಿ ನೀಡಿದ್ದಾರೆ.
ಪ್ರಕರಣದಲ್ಲಿ ಭಾಗಿಯಾದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಐಡೆಂಟಿಫೈ ಮಾಡಿದ್ದಾರೆ. ಅವರನ್ನ ಫಾಲೋ ಅಪ್ ಮಾಡುವ ಸಲುವಾಗಿ ಪೊಲೀಸರು ಹೈದ್ರಾಬಾದ್ ಗೆ ಹೋಗಿದ್ದಾರೆ. ಒಂದೆರಡು ದಿನದಲ್ಲಿ ಆರೋಪಿಗಳನ್ನು ಹಿಡಿಯುವುದು ಖಚಿತ ಎಂದರು.
ಎಟಿಎಂ ಕೇಂದ್ರವನ್ನು ಸುಮಾರು ದಿನಗಳಿಂದ ಅಬ್ಜರ್ವ್ ಮಾಡಿದ್ದಾರೆ. ಎಟಿಎಂಗೆ ಹಣ ಹಾಕುವ ಕೆಲಸವನ್ನು ಖಾಸಗಿ ಕಂಪನಿಗೆ ಗುತ್ತಿಗೆ ಕೊಟ್ಟಿದ್ದರು. ಹೈದ್ರಾಬಾದ್ ನ ಕಂಪನಿಯೊಂದು ಈ ಗುತ್ತಿಗೆ ಪಡೆದಿತ್ತು. ಘಟನೆ ನಡೆದ ಎಟಿಎಂನಲ್ಲಿ ಬಂದೂಕು ಸಹಿತ ಗಾರ್ಡ್ ಇಲ್ಲದ್ದನ್ನ ನೋಡಿಯೇ ಈ ಕೆಲಸ ಮಾಡಿದ್ದಾರೆ ಎಂದು ಗೃಹಸಚಿವರು ಹೇಳಿದರು.
ಆರೋಪಿಗಳು ಬೈಕ್ ನಲ್ಲೇ ಹಣದ ಬಾಕ್ಸ್ ಕೊಂಡೊಯ್ಯಲು ಪರದಾಡಿದ್ದಾರೆ. ಬಳಿಕ ಬ್ಯಾಗ್ ಗೆ ಕ್ಯಾಷ್ ಹಾಕಿಕೊಂಡಿದ್ದಾರೆ. ಆರೋಪಿಗಳನ್ನು ಒಂದೆರಡು ದಿನದಲ್ಲೇ ಪತ್ತೆ ಮಾಡುತ್ತೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ