Belagavi NewsBelgaum NewsKannada NewsPolitics

*ಕುಂಭಮೇಳದಲ್ಲಿ ನಾಲ್ವರ ಸಾವು: ಪರಿಹಾರ ಹೆಚ್ಚಿಸುವ ಬಗ್ಗೆ ಸಿಎಂ ಜೊತೆ ಚರ್ಚೆ: ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಕುಂಭಮೇಳದ ಕಾಲ್ತುಳಿದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಿಸಿದ್ದು, ಪರಿಹಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮಾನಿಟರ್ ಮಾಡುತ್ತಿದ್ದೇವೆ, ಯಾವ ರೀತಿ ಹ್ಯಾಂಡಲ್ ಮಾಡಬೇಕು ಅನ್ನೋ ಚರ್ಚೆಯಾಗುತ್ತಿದೆ ಎಂದು ಸಚಿವ ಸತೀಸ್ ಜಾರಕೊಹೊಳಿ ಹೇಳಿದರು. 

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪರಿಹಾರ ಮೊತ್ತ ಹೆಚ್ಚು ಮಾಡೋ ಬಗ್ಗೆ ಸಿಎಂ ಚರ್ಚೆ ಮಾಡಿ ನಿರ್ಣಯ ಮಾಡುತ್ತಾರೆ, ಡಿಸಿಗೆ ಎಷ್ಟು ಅಧಿಕಾರ ಇದ್ಯೋ ಅಷ್ಟು ಅನೌನ್ಸ್ ಮಾಡಿದ್ದಾರೆ ಎಂದು ತಿಳಿಸಿದರು.

Home add -Advt

ಮುಂದಿನ ಐದು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂಬ ಯತಿಂದ್ರ ಹೇಳಿಕೆಗೆ ಸಂಬಂಧಪಟ್ಟಂತೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಸಿಎಂ ಬದಲಾವಣೆ ಬಗ್ಗೆ ಯಾಕೆ ಮಾತನಾಡಿದರು ಅಂತ ನನಗೆ ಗೊತ್ತಿಲ್ಲ, ಸಿಎಂ ಕುರ್ಚಿಗೆ ಸಂಬಂಧಪಟ್ಟಂತೆ ಅವರು ಯಾಕೆ ಆ ರೀತಿ ಹೇಳಿದರು ಅಂತ ನನಗೆ ಗೊತ್ತಿಲ್ಲ ಅದ್ಯಾಕೆ ಆ ರೀತಿ ಹೇಳಿದರು ಎಂದು ಅವರಲ್ಲೇ ಕೇಳಿ, ಆ ರೀತಿ ಮಾತನಾಡಬಾರದು ಅಂತ ನಾವೇನು ರಿಸ್ಟ್ರಿಕ್ ಮಾಡಿಲ್ಲ, ಸಮಯ ಬಂದಾಗ ನಾವೇ ಹೇಳುತ್ತೇವೆ ಎಂದರು.

ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ವಿಚಾರದ ಬಗ್ಗೆ ಮಾತನಾಡಿದ ಅವರು, ಆದಷ್ಟು ಬೇಗ ಸುಗ್ರೀವಾಜ್ಞೆಯನ್ನು ಜಾರಿಗೆ ತರುತ್ತೇವೆ, ಇಷ್ಟು ದಿನ ಆದರೂ ಯಾಕೆ ತಡವಾಗಿದೆ ಎಂದು ಗೊತ್ತಿಲ್ಲ. ಕೋಟ್ಯಂತರ ಜನ ದುಡ್ಡು ತೆಗೆದುಕೊಂಡಿದ್ದಾರೆ. ಆದಷ್ಟು ಬೇಗ ಕಾನೂನು ಬಂದರೆ ಎಲ್ಲವೂ ನಮ್ಮ ನಿಯಂತ್ರಣಕ್ಕೆ ಬರಲಿದೆ ಎಂದು ಜಾರಕಿಹೊಳಿ ತಿಳಿಸಿದರು.

ಪರಮೇಶ್ವರ್ ಕೊಠಡಿಯಲ್ಲಿ ದಲಿತ ಸಚಿವರ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಜಾರಕಿಹೊಳಿ, ಕೇವಲ ರಾಜಕೀಯವಾಗಿ ಮಾತನಾಡಿದ್ದೇವೆ ಅಷ್ಟೇ, ಅದು ಬಿಟ್ಟು ಬೇರೆ ಏನೂ ಕೂಡ ಮಾತನಾಡಿಲ್ಲ, ಈ ವರ್ಷದ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಯಿದೆ ಹೊಸ ಟೆಕ್ನಾಲಜಿ ಬರಬೇಕು ದೇಶ ಅಭಿವೃದ್ಧಿ ಆಗಬೇಕು ಅಂದರೆ ಬಜೆಟ್ ಬೇಕು ಎಂದು ಹೇಳಿದರು.

ಹತ್ತು ವರ್ಷದಿಂದ ಬಜೆಟ್ ನೋಡಿದ್ದೇವೆ, ಪ್ರತಿ ವರ್ಷ ಬಜೆಟ್ ಗಾತ್ರ ದೊಡ್ಡದಿರುತ್ತದೆ ಆದರೆ ಅದು ಜನರಿಗೆ ತಲುಪಬೇಕಲಾ, ಜಿಎಸ್ ಟಿಯಲ್ಲಿ ಮೋಸ ಆಗಲೇ ಇದೆ, ದೇಶದ ಅಭಿವೃದ್ಧಿ ಮುಖ್ಯ ಅಷ್ಟೇ, ಅದು ಯಾವಾಗ ಆಗುತ್ತೆ ಯಾವಾಗ ಕಾಲ ಕೂಡಿ ಬರುತ್ತೋ ನೋಡೋಣ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

Related Articles

Back to top button