ಪ್ರಗತಿವಾಹಿನಿ ಸುದ್ದಿ: 2025-26ರ ಕೇಂದ್ರ ಬಜೆಟ್ ಡಿಜಿಟಲ್ ಮೂಲ ಸೌಕರ್ಯಗಳಿಗೆ, ಗ್ರಾಹಕರಿಂದ ಖರೀದಿ ಖರ್ಚುಗಳಿಗೆ ಒಟ್ಟಾರೆ ಚಿಲ್ಲರೆ ವ್ಯಾಪಾರದ ಪರಿಸರ ವ್ಯವಸ್ಥೆಗೆ ಬಲವಾದ ಉತ್ತೇಜನ ನೀಡಲಿದೆ ಎಂದು ಸಂಗೀತಾ ಮೊಬೈಲ್ಸ್ ವ್ಯವಸ್ಥಾಪಕ ನಿರ್ದೇಶಕ ಸುಭಾಷ್ ಚಂದ್ರ ಅಭಿಪ್ರಾಯ ಪಟ್ಟಿದ್ದಾರೆ.
₹12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿಯು ಮಧ್ಯಮ ವರ್ಗದ ಜನರ ಪಸ್೯ಗಳಲ್ಲಿ ಹೆಚ್ಚಿನ ಹಣ ಉಳಿಸಲಿದ್ದು , ಉನ್ನತ ದರ್ಜೆಯ ಸ್ಮಾಟ್೯ ಫೋನ್ ಮತ್ತು ಸ್ಮಾರ್ಟ್ ಗ್ಯಾಜೆಟ್ಗಳಿಗೆ ಬೇಡಿಕೆ ಹೆಚ್ಚಿಸಲಿದೆ.ಭಾರತ್ ನೆಟ್ ಅಡಿಯಲ್ಲಿ 5G ತರಂಗಾಂತರದ ನಿರಂತರ ವಿಸ್ಯರಣೆಗೆ ಒತ್ತು ಮತ್ತು ಡಿಜಿಟಲ್ ಮೂಲಸೌಕರ್ಯ ಸಂಪರ್ಕ ಸಾಧ್ಯತೆಗಳನ್ನು ಹೆಚ್ಚಿಸಲಿದ್ದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ಮಾರ್ಟ್ ಉಪಕರಣಗಳ ಅಳವಡಿಕೆಗೆ ಚಾಲನೆ ನೀಡಲಿದೆ.
ಆಳವಾದ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ) ಯಲ್ಲಿ ಸರಕಾರದ ಹೂಡಿಕೆಯು ಡಿಜಿಟಲ್ ಚಿಲ್ಲರೆ ವ್ಯಾಪಾರ ವಲಯ ಮತ್ತು ತ್ವರಿತ ವಾಣಿಜ್ಯ ವಲಯಗಳ ಸಾಮರ್ಥ್ಯವನ್ನು ಬಲಪಡಿಸಲಿದೆ. ವಿಲೀನ ಮತ್ತು ಸ್ವಾಧೀನ ಪ್ರಕ್ರಿಯೆಗಳ ಸರಳಗೊಳಿಸುವಿಕೆಯು ಚಿಲ್ಲರೆ ಮತ್ತು ಇ ವಾಣಿಜ್ಯ ವಲಯಗಳಲ್ಲಿ ಕ್ರೋಢೀಕರಣ ಮತ್ತು ವಿಸ್ತರಣೆಯನ್ನು ಪ್ರೋತ್ಸಾಹಿಸಲಿದೆ.ಭಾರತದ ದೇಶೀಯ ಬಳಕೆ ಮತ್ತು ದೇಶವು ಜಾಗತಿಕವಾಗಿ ಇಲೆಕ್ಟ್ರಾನಿಕ್ ಚಿಲ್ಲರೆ ವ್ಯಾಪಾರದ ಬೃಹತ್ ಜಾಲವಾಗಿ ಸ್ಥಾನ ಪಡೆಯುವ ಈ ಮುಮ್ಮುಖ ಪ್ರಗತಿಪೂರಕ ಆಲೋಚನೆಗಳನ್ನು ಉದ್ಯಮದ ಮುಖ್ಯಸ್ಥನಾಗಿ,ಸ್ವಾಗತಿಸುತ್ತೇವೆ. ಬೇಡಿಕೆ, ನವೋನ್ವೇಷಣೆ ಹಾಗೂ ಗ್ರಾಹಕರ ಅಪರಿಮಿತ ಅನುಭವದ ಹೆಚ್ಚಳವನ್ನು ನಾವು ನಿರೀಕ್ಷಿಸುತ್ತೇವೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ