Belagavi NewsBelgaum NewsKannada NewsKarnataka News

*ಗೆಳೆಯರ ಬಳಗದಿಂದ ಮಹಾಂತೇಶ ರಾಹೂತ, ಪ್ರಸನ್ನ ಕುಲಕರ್ಣಿಗೆ ಸನ್ಮಾನ*

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಸ್ಥಳೀಯ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಶನಿವಾರ ಗೆಳೆಯರ ಬಳಗದ ವತಿಯಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ರಾಹೂತ ಮತ್ತು ಪತ್ರಕರ್ತ ಪ್ರಸನ್ನ ಕುಲಕರ್ಣಿ ಅವರನ್ನು ಸತ್ಕರಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಗೆಳೆಯರ ಬಳಗದ ಹಿರಿಯ ಸದಸ್ಯ ಹಾಗೂ ನಿವೃತ್ತ ಅರಣ್ಯ ಅಧಿಕಾರಿ ಮಲ್ಲೇಶಪ್ಪ ಬೆನಕಟ್ಟಿ, “ಗೆಳೆಯರ ಬಳಗದ ಹಿರಿಯ ಸದಸ್ಯ ಮಹಾಂತೇಶ ರಾಹೂತ ಅವರ ಸಂಘಟನಾ ಚತುರತೆಯನ್ನು ಗಮನಿಸಿದ ಕಾಂಗ್ರೆಸ್ ಪಕ್ಷ ಅವರನ್ನು ಈಚೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಳಿಸಿದೆ. ಅದೇ ರೀತಿ ಪತ್ರಕರ್ತ ಹಾಗೂ ನಮ್ಮ ಬಳಗದ ಮತ್ತೋರ್ವ ಸದಸ್ಯ ಪ್ರಸನ್ನ ಕುಲಕರ್ಣಿ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹೀಗಾಗಿ ಬಳಗದ ವತಿಯಿಂದ ಇವರಿಬ್ಬರನ್ನು ಗೌರವಿಸಲಾಗಿದೆ” ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರಭಾಕರ ಭಟ್, ಪ್ರಕಾಶ ಕಾದ್ರೊಳ್ಳಿ, ಆದರ್ಶ ರಾಹೂತ, ಜೆ.ಎಸ್ ಜೋಡಂಗಿ, ಸುಭಾಸ ಸತ್ತಿಗೇರಿ ಮತ್ತಿತರರು ಇದ್ದರು. ಪ್ರಸನ್ನಕುಮಾರ ಎಚ್.ಎಂ ಸ್ವಾಗತಿಸಿದರು. ಆನಂದ ಭಿಂಗೆ ನಿರೂಪಿಸಿದರು, ಬಾಲರಾಜ ಭಜಂತ್ರಿ ವಂದಿಸಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button