Kannada NewsKarnataka NewsNationalPolitics

*ಸಿಎಂ ಬದಲಾವಣೆಯ ಬಾಂಬ್ ಸಿಡಿಸಿದ ಆರ್ ಅಶೋಕ*

ಪ್ರಗತಿವಾಹಿನಿ ಸುದ್ದಿ : ನವೆಂಬರ್ ನಲ್ಲಿ ಸಿಎಂ ಬದಲವೆಯಾಗಲಿದ್ದಾರೆ ಎಂದು  ವಿಪಕ್ಷ ನಾಯಕ ಆರ್ ಅಶೋಕ ಹೊಸ ಬಾಂಬ್ ಸಿಡಿಸಿದ್ದಾರೆ. 

ಈ ಬಗ್ಗೆ ಮಾತನಾಡಿದ ಅವರು, ನವೆಂಬರ್ ತಿಂಗಳಲ್ಲಿ ಸಿದ್ದರಾಮಯ್ಯ ಸ್ಥಾನವನ್ನು ಡಿ.ಕೆ ಶಿವಕುಮಾರ್ ಆಕ್ರಮಿಸಲಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತ ಚರ್ಚೆಗಳಿಗೆ ಕಾಂಗ್ರೆಸ್ ಹೈಕಮಾಂಡ್ ಹಲವು ಬಾರಿ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದರೂ ಅದೆಲ್ಲದರ ಹೊರತಾಗಿಯೂ ಕಾಂಗ್ರೆಸ್ ಪಾಳಯದಲ್ಲಿಯೂ ಚರ್ಚೆ ನಡೆಯುತ್ತಿದೆ, ವಿಪಕ್ಷಗಳು ಸಹ ವಿಷಯ ಕೆದಕುತ್ತಿವೆ.

ನವೆಂಬರ್ ಗೆ ಎರಡೂವರೆ ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಅಶೋಕ ಈ ರೀತಿ ಮಾತನಾಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button