*ಫೆ. 8 ಕ್ಕೆ ವಿಟಿಯು 24ನೇ ವಾರ್ಷಿಕ ಘಟಿಕೋತ್ಸವ ಭಾಗ -2* *ಕುಲಪತಿ ಪ್ರೊ.ವಿದ್ಯಾಶಂಕರ ಅವರ ದೂರದೃಷ್ಟಿ ಯೋಜನೆ*
![](https://pragativahini.com/wp-content/uploads/2025/02/IMG_20250205_195424_650_x_350_pixel.jpg)
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ವಾರ್ಷಿಕ ಘಟಿಕೋತ್ಸವ(ಭಾಗ -2) ಶನಿವಾರ, ದಿನಾಂಕ 08ನೇ ಫೆಬ್ರವರಿ, 2025 ರಂದು ಪೂರ್ವಾಹ್ನ11ಕ್ಕೆ ವಿ.ತಾ.ವಿ.“ಜ್ಞಾನಸಂಗಮ” ಆವರಣದ ಡಾ. ಎ. ಪಿ. ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕವನ್ನು ಜಾಗತಿಕ ಅಧ್ಯಯನ ತಾಣವನ್ನಾಗಿ ರೂಪಿಸುವ ಮತ್ತು ಶಿಕ್ಷಣದ ಅಂತರಾಷ್ಟ್ರೀಕರಣಕ್ಕೆ ವಿ. ಟಿ. ಯು. ಸಂಶೋಧನೆಗೆ ಮತ್ತು ನಾವಿನ್ಯತೆಗೆ ಒತ್ತು ಕೂಡುವ ಉದ್ದೇಶದಿಂದ ಮತ್ತು ಹೊಸದಾದ ಬೋಧನಾ ಆಯಾಮಗಳ ಬಗ್ಗೆ ಚಿಂತನೆ ನಡೆಸಿದ್ದು ಉತ್ತಮ ಗುಣಮಟ್ಟದ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಹಾಗೂ ಔದ್ಯೋಗಿಕ ರಂಗದ ದಿಗ್ಗಜರೊಂದಿಗೆ ಇಂಟರ್ನ್ ಶಿಪ್ / ತರಬೇತಿ ರೀತಿಯಲ್ಲಿಅಧ್ಯಾಪಕರು/ವಿದ್ಯಾರ್ಥಿ ವಿನಿಮಯದಂತಹ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ.
ಜೊತೆಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ/ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರಯತ್ನ ಪಡುವ ನಮ್ಮ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬ, ಅಡೆತಡೆಗಳು/ತೊಂದರೆಗಳನ್ನು ಎದುರಿಸಬಾರದು ಎಂದು ವಿ ಟಿ ಯು ಅಂತರಾಷ್ಟ್ರೀಯ ಶೈಕ್ಷಣಿಕ ಕ್ಯಾಲೆಂಡರ್ನೊಂದಿಗೆ ವಿ ಟಿ ಯು ಶೈಕ್ಷಣಿಕ ಕ್ಯಾಲೆಂಡರ್ ನ್ನು ಸರಿ ಹೊಂದುವಂತೆ ಮಾಡಿ ದಾಖಲೆ ಸಮಯದಲ್ಲಿ ಪರೀಕ್ಷಾ ಫಲಿತಾಂಶವನ್ನು ನೀಡುವ ಮೂಲಕ ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ/ಪ್ರತಿಷ್ಠಿತ ಸಂಸ್ಥೆಗಳಿಗೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ.
ಅಷ್ಟೇ ಅಲ್ಲದೆ, ಉನ್ನತ ವ್ಯಾಸಂಗ ಜೊತೆಗೆ ಔದ್ಯೋಗಿಕ ಕ್ಷೇತ್ರದಲ್ಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಪದವೀಧರರಿಗೆ ಪದವಿ ಪ್ರಮಾಣಪತ್ರಗಳನ್ನು ನೀಡುವಲ್ಲಿ ವಿಳಂಬವನ್ನು ತಪ್ಪಿಸಲು, ಪದವಿ ಶಿಕ್ಷಣ ಮುಗಿಸಿ ಕ್ಯಾಂಪಸ್ ಆಯ್ಕೆ ಅಥವಾ ನೇರ ಆಯ್ಕೆ ಮುಖಾಂತರ ಉದ್ಯೋಗ ಸೇರುವ ಪದವೀಧರರಿಗೆ ಹಲವಾರು ಕಂಪನಿಗಳು ಮತ್ತು ಸರ್ಕಾರೀ ಸ್ವಾಮ್ಯದ ಸಾರ್ವಜನಿಕ ವಲಯದ ಸಂಸ್ಥೆಗಳು ಉದ್ಯೋಗಕ್ಕೆ ಸೇರಿಕೊಳ್ಳುವ ಸಮಯದಲ್ಲೇ ಪದವಿ ಪ್ರಮಾಣಪತ್ರಗಳನ್ನು ಸಲ್ಲಿಸಲು ಸೂಚಿಸುತ್ತಿರುವುದರಿಂದ ವಿಶ್ವವಿದ್ಯಾಲಯವು ಒಂದು ಶೈಕ್ಷಣಿಕ ವರ್ಷದಲ್ಲಿ ಎರಡು ಘಟಿಕೋತ್ಸವಗಳನ್ನು ನಡೆಸಲು ಯೋಜಿಸಿದೆ.
ಇದರ ಅಂಗವಾಗಿ ವಿ ಟಿ ಯು ಕುಲಪತಿ ಪ್ರೊ ವಿದ್ಯಾಶಂಕರ್ ಎಸ್. ಅವರ ದೂರದೃಷ್ಟಿಯಿಂದ ಕಳೆದ ಎರಡು ಘಟಿಕೋತ್ಸವಗಳಿಂದ ಸ್ನಾತಕ ಪದವಿ ಪ್ರಧಾನಕ್ಕೆ ಭಾಗ ಒಂದು ಮತ್ತು ಸ್ನಾತಕೋತ್ತರ ಪದವಿಗಳಿಗೆ ಭಾಗ ಎರಡು ಒಟ್ಟು ಒಂದು ಶೈಕ್ಷಣಿಕ ವರ್ಷದಲ್ಲಿ ಎರಡು ಘಟಿಕೋತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಅದರಂತೆ 24ನೇ ವಾರ್ಷಿಕ ಘಟಿಕೋತ್ಸವದ ಭಾಗ -1 ನ್ನು ಕಳೆದ ಜುಲೈ 18 ರಂದು ಹಮ್ಮಿಕೊಂಡು ಸ್ನಾತಕ (ಯು ಜಿ – ಪದವಿ) ಮತ್ತು ಸಂಶೋಧನಾ ಪದವಿಗಳನ್ನು ನೀಡಲಾಗಿದೆ.
ಈಗ ಈ 24 ನೇ ವಾರ್ಷಿಕ ಘಟಿಕೋತ್ಸವದ ಭಾಗ -2 ನ್ನು ಸ್ನಾತಕೋತ್ತರ (ಪಿಜಿ) ಅಂದರೆ ಎಂ.ಬಿ.ಎ., ಎಂ.ಸಿ.ಎ., ಎಂ.ಟೆಕ್., ಎಂ.ಆರ್ಚ್., ಹಾಗೂ ಎಂ.ಪ್ಲಾನ್. ಹಾಗೂ ಸಂಶೋಧನಾ ಪದವಿ (ಪಿ. ಎಚ್ ಡಿ., ಎಂ. ಸಿ. (engg ), ಇಂಟಿಗ್ರೇಟೆಡ್ ಡುಯಲ್ ಡಿಗ್ರಿ) ಗಳನ್ನು ನೀಡಲಾಗುತ್ತಿದೆ.
24ನೇ ವಾರ್ಷಿಕ ಘಟಿಕೋತ್ಸವ(ಭಾಗ -2) ನ್ನು ಶನಿವಾರ, ದಿನಾಂಕ 08ನೇ ಫೆಬ್ರವರಿ, 2025 ರಂದು ಪೂರ್ವಾಹ್ನ11 ಕ್ಕೆ ವಿ.ತಾ.ವಿ.“ಜ್ಞಾನಸಂಗಮ” ಆವರಣದ ಡಾ. ಎ. ಪಿ. ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಿದೆ
• ಶ್ರೀ.ಥಾವರ್ ಚಂದ್ ಗೆಹ್ಲೋಟ್, ರಾಜ್ಯಪಾಲರು, ಕರ್ನಾಟಕ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಅಧ್ಯಕ್ಷತೆ ವಹಿಸುವರು. ಡಾ.ಎಂ.ಸಿ.ಸುಧಾಕರ್, ಸಚಿವರು, ಉನ್ನತ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ ಮತ್ತು ವಿಶ್ವವಿದ್ಯಾಲಯದ ಸಮ ಕುಲಾಧಿಪತಿಗಳು ಉಪಸ್ಥಿತರಿರುವರು. • ಡಾ. ಟೆಸ್ಸಿ ಥಾಮಸ್, ಖ್ಯಾತ ವಿಜ್ಞಾನಿಗಳು, ಮಾನ್ಯ ಕುಲಪತಿಗಳು, ನೂರುಲ್ ಇಸ್ಲಾಂ ಸೆಂಟರ್ ಫಾರ್ ಹೈಯರ್ ಎಜುಕೇಶನ್, ಕನ್ಯಾಕುಮಾರಿ, ಮಾಜಿ ಮಹಾನಿರ್ದೇಶಕರು ಏರೋನಾಟಿಕಲ್ ಸಿಸ್ಟಮ್ಸ್ ಮತ್ತು ಮಾಜಿ ಯೋಜನಾ ನಿರ್ದೇಶಕರು, ಅಗ್ನಿ – ೪ ಮಿಸೈಲ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಓ), ನವ ದೆಹಲಿ ಇವರು ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡುವರು.
ವಿಶ್ವವಿದ್ಯಾಲಯದ ಈ 24ನೇ ವಾರ್ಷಿಕ ಘಟಿಕೋತ್ಸವದ (ಭಾಗ -2 ) ಸಮಯದಲ್ಲಿ, MBA- 7194 (4947 + 2247 from Autonomous Colleges), MCA- 3784(2648 +1136 from Autonomous Colleges), M.Tech.-1313(477+836 from Autonomous Colleges), M. Arch.-83 (72 +11 from Autonomous Colleges), M. Plan.-23 ಹಾಗೂ ಸಂಶೋಧನಾ ಪದವಿಗಳಾದ ಪಿ.ಎಚ್ ಡಿ .425 ., ಎಂ ಎಸ್ಸಿ.(Engg) ಬೈ ರಿಸರ್ಚ್ ೦೩ ಹಾಗೂ ಇಂಟಿಗ್ರೇಟೆಡ್ ಡುಯಲ್ ಡಿಗ್ರಿ 05 ಪದವಿಗಳನ್ನು ನೀಡಲಾಗುವುದು ಎಂದು ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸ್ಗಳ ವ್ಯವಸ್ಥೆ
ಘಟಿಕೋತ್ಸವಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಪಾಲಕರು ಹಾಗೂ ಆಹ್ವಾನಿತರಿಗೆ ಗುರುವಾರ, ದಿನಾಂಕ 08ನೇ ಫೆಬ್ರವರಿ, 2025 ರಂದು ಕೇಂದ್ರ ಬಸ್ ನಿಲ್ದಾಣ, ಬೆಳಗಾವಿಯಿಂದ ಬೆಳಗ್ಗೆ 7.00 ರಿಂದ 9.00 ಘಂಟೆಯವರೆಗೆ ಬಸ್ಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ