Belagavi NewsBelgaum NewsKannada NewsKarnataka NewsNationalTravel
*ಬೆಳಗಾವಿ-ಮಿರಜ್ ವಿಶೇಷ ರೈಲುಗಳ ಸಂಚಾರ ಭಾಗಶಃ ರದ್ದು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕುಡಚಿ-ಉಗರ್ ಖುರ್ದ್ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವ ಹಿನ್ನೆಲ್ಲೆಯಲ್ಲಿ, ಈ ಕೆಳಗಿನ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ
ಫೆಬ್ರವರಿ 8 ರಿಂದ 20, 2025 ರವರೆಗೆ, ಬೆಳಗಾವಿ-ಮಿರಜ್ ಕಾಯ್ದಿರಿಸದ ವಿಶೇಷ (ರೈಲು ಸಂಖ್ಯೆ 07303) ರೈಲು ಕುಡಚಿವರೆಗೂ ಮಾತ್ರ ಸಂಚರಿಸಲಿದೆ. ಕುಡಚಿ ಮತ್ತು ಮಿರಜ್ ನಿಲ್ದಾಣಗಳ ನಡುವಿನ ಪ್ರಯಾಣ ರದ್ದಾಗಿದೆ. ಈ ರೈಲು ಕುಡಚಿ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ.
ಫೆಬ್ರವರಿ 8 ರಿಂದ 20, 2025 ರವರೆಗೆ, ರೈಲು ಸಂಖ್ಯೆ 07304 ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲು ಮಿರಜ್ ನಿಲ್ದಾಣದ ಬದಲು ಕುಡಚಿ ನಿಲ್ದಾಣದಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ಕುಡಚಿ ಮತ್ತು ಮಿರಜ್ ನಿಲ್ದಾಣಗಳ ನಡುವಿನ ಪ್ರಯಾಣ ರದ್ದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ