ಪ್ರಗತಿವಾಹಿನಿ ಸುದ್ದಿ: 5 ವರ್ಷಗಳ ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿ ಐ) ರೆಪೋ ದರವನ್ನು ಇಳಿಕೆ ಮಾಡಿದೆ ಎಂದು ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಘೋಷಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್ ಬಿಐ ಗವರ್ನರ್, ರೆಪೊ ದರವನ್ನು ಇಳಿಕೆ ಮಾಡಲಾಗಿದೆ. ರೆಪೋ ದರ 0.25%ರಷ್ಟು ಕಡಿತ ಮಾಡಲಾಗಿದೆ. ಈ ಮೂಲಕ ಆರ್ ಬಿ ಐ ನೀಡುವ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗಿದೆ.
6.50ರಷ್ಟಿದ್ದ ರೆಪೋ ದರ ಈಗ 6.25ಕ್ಕೆ ಇಳಿಕೆಯಾಗಿದೆ. ಇದರಿಂದ ಗೃಹ ಸಾಲ ಪಡೆಯುವವರಿಗೆ ಬಡ್ಡಿದರ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ