Kannada NewsKarnataka NewsLatest

ಅಭಿವೃದ್ಧಿ ಕಾಮಗಾರಿಗೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ -ನಿಪ್ಪಾಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮಂಜೂರಾದ ವಿವಿಧ ಅಭಿವೃದ್ಧಿ ಕಾಮಗಾರಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು.
ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಗ್ರಾಮ ಪರಿಮಿತಿಯಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ೩೮ ಲಕ್ಷ ರೂ. ಭೋಜ ಗ್ರಾಮದಲ್ಲಿ ೩೨ ಲಕ್ಷ ರೂ. ಕೊಗನೋಳಿ ಗ್ರಾಮದಲ್ಲಿ ೩೮ ಲಕ್ಷ ರೂ. ಆಡಿ ಗ್ರಾಮದಲ್ಲಿ ೩೦ ಲಕ್ಷ ರೂ. ರಸ್ತೆ ಸುಧಾರಣೆಗೆ ಜೊಲ್ಲೆ  ಪೂಜೆ ಸಲ್ಲಿಸಿದರು.

ಗ್ರಾಮದ ಜನರ ಬಹುದಿನಗಳ ಬೇಡಿಕೆಗೆ ಅನುಗುಣವಾಗಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ನಿಪ್ಪಾಣಿ ಮತಕ್ಷೇತ್ರದ ಎಲ್ಲ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಅವಿರತವಾಗಿ ಶ್ರಮವಹಿಸಲಾಗುವುದೆಂದು ಅವರು ಹೇಳಿದರು. ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತಂದು ಮತಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಮಾದರಿ ಮತಕ್ಷೇತ್ರ ನಿರ್ಮಾಣ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಕಾರದಗಾ ಗ್ರಾಮದಲ್ಲಿ ೨೮, ಭೋಜ ಗ್ರಾಮದಲ್ಲಿ ೨೨, ಕೊಗನೊಳಿ ಗ್ರಾಮದಲ್ಲಿ ೧೫, ಆಡಿ ಗ್ರಾಮದಲ್ಲಿ ೮ ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಿದರು. ಹಾಗೂ ಕೊಗನೊಳಿ ಗ್ರಾಮದಲ್ಲಿ ೧೫ ಸಂದ್ಯಾ ಸುರಕ್ಷಾ ಪೆನಷನ್ ಮತ್ತು ೨೦ ಉಜ್ವಲಾ ಗ್ಯಾಸ್ ಗಳನ್ನು ವಿತರಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪವನ ಪಾಟೀಲ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಶಶಿಕಲಾ ಜೊಲ್ಲೆಯವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಬಹುದಿನಗಳ ಬೇಡಿಕೆಯಾಗಿದ್ದ ಗ್ರಾಮದ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಬೇಡಿಕೆ ಇಡಲಾಗಿದ್ದು, ಅದರಂತೆ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿ ಗ್ರಾಮದ ಜನತೆಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ ಪಂ ಸದಸ್ಯೆ ಸುಮಿತ್ರಾ ಉಗಳೆ, ತಾ ಪಂ ಸದಸ್ಯ ದಾದಾಸೊ ನರಗಟ್ಟೆ, ಎಪಿಎಮ್‌ಸಿ ಸದಸ್ಯರಾದ ನೀತೀಶ ಖೋತ, ಸಿಡಿಪಿಓ ಸಾವಿತ್ರಿ ಗುಗ್ಗರಿ ಭಾರತಿ ಖೋತ, ಎಸ್ ಕೆ ಮಾಳಿ, ಸೋಮರಾಯ ಗಾವಡೆ, ಅರವಿಂದ ಕಾಂಬಳೆ, ದೇವಪ್ಪಾ ದೇವಕಟ್ಟಿ, ಪ್ರಕಾಶ ವಡ್ಡರ, ಪ್ರಶಾಂತ ಪಾಟೀಲ, ಶ್ರೀಧರ ಮಾಳಗೆ, ಸಚೀನ ಮೋಹಿತೆ, ಶಾಹಿರಾ ಸನದಿ, ಅಜೀತ ಸಂಕಪಾಳ, ವೈಭವ ಪಾಟೀಲ, ಕುಮಾರ ಪಾಟೀಲ, ಸುನೀಲ ಮಾನೆ, ಬಬನ ಹವಲ್ದಾರ, ಶಿವಗಡ ಪಾಟೀಲ, ಸಂಜಯ ದೇಶಪಾಂಡೆ, ಶಾಮರಾವ ಮಾನೆ, ಬಾಳು ಕಾಗಲೆ, ಧನಾಜಿ ಪಾಟೀಲ, ಕಮಲ ಪಾಟೀಲ, ನಿರುಪಮಾ ಪಾಟೀಲ ಸೇರಿದಂತೆ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

 

ಕುಂದು ಕೊರತೆಗಳನ್ನು ಆಲಿಸಿದ ಸಚಿವೆ ಶಶಿಕಲಾ ಜೊಲ್ಲೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ನಾಗರಿಕರ ಸಬಲೀಕರಣ ಆಹಾರ ಮತ್ತು ನಾಗರಿಕರ ಸರಬರಾಜು ಹಾಗೂ ಗ್ರಾಹಕ ಖಾತೆ ಸಚಿವರಾದ ಶಶಿಕಲಾ ಜೊಲ್ಲೆ ತಮ್ಮ ಯಕ್ಸಂಬಾ ಗ್ರಾಮದ ಗೃಹ ಕಛೇರಿಯಲ್ಲಿ ಜನತಾ ದರ್ಶನ ನಡೆಸಿ ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ ಮಹಿಳೆಯರು, ಹಿರಿಯ ನಾಗರಿಕರು, ಸಂಘ ಸಂಸ್ಥೆಯ ಪ್ರತಿನಿಧಿಗಳು, ರೈತರ ಹಾಗೂ ಗ್ರಾಮದ ಮುಖಂಡರುಗಳ ಸಮಸ್ಯೆಗಳನ್ನು ಆಲಿಸಿ ಅವರ ಮನವಿ ಪತ್ರಗಳನ್ನು ಸ್ವೀಕರಿಸಿದರು.

ಈ ಎಲ್ಲ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಅವರ ಬೇಡಿಕೆಗಳಿಗೆ ಸ್ಪಂದಿಸಿದರು. ಸ್ವೀಕರಿಸಿದ ಪತ್ರಗಳನ್ನು ಪರಿಶೀಲನೆ ನಡೆಸಿ ಅವುಗಳನ್ನು ಗಣನೆಗೆ ತೆಗೆದುಕೊಂಡು ಭರವಸೆಗಳನ್ನು ಆದಷ್ಟು ಬೇಗನೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button