![](https://pragativahini.com/wp-content/uploads/2025/02/Elukoti.jpg)
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ನಗರ ವಲಯದ ಎಸ್ ಎಸ್ ಎಲ್ ಸಿ 2023 ಮತ್ತು 2024ರ ಪರೀಕ್ಷೆಯಲ್ಲಿ ವಲಯ ಮಟ್ಟದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಶಿಕ್ಷಕರಿಗೆ ಗೌರವ ಪುರಸ್ಕಾರ ಕಾರ್ಯಕ್ರಮವನ್ನು ಕಿತ್ತೂರು ತಾಲೂಕಿನ ಶ್ರೀ ರಾಜ ಗುರುಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿಯ ಶತಮಾನದ ಇತಿಹಾಸ ಹೊಂದಿರುವ ಕೆಎಲ್ ಇ ಸಂಸ್ಥೆಯ ಚೊಚ್ಚಲ ಅಂಗ ಸಂಸ್ಥೆಯಾಗಿರುವ ಕೆಎಲ್ ಇ ಜಿ.ಎ. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ಕನ್ನಡ ಮಾಧ್ಯಮದಲ್ಲಿ ಆಂಗ್ಲ ಭಾಷೆಯನ್ನು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸುತ್ತಿರುವ ಹಾಗೂ ಉತ್ತಮ ಫಲಿತಾಂಶ ನೀಡಿರುವ ಶಿಕ್ಷಕ ಶಿವರಾಯಪ್ಪ ಏಳುಕೋಟಿ ಅವರಿಗೆ ಈ ಪುರಸ್ಕಾರ ಪ್ರದಾನ ಮಾಡಲಾಯಿತು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರತಿ ವರ್ಷ ಬೆಳಗಾವಿಯ ಜಿ.ಎ. ಪ್ರೌಢಶಾಲೆ ಗಣನೀಯವಾದ ಸಾಧನೆ ಮಾಡುತ್ತಿದೆ. ಅದರಲ್ಲೂ ಜಿ.ಎ.ಪ್ರೌಢಶಾಲೆಯ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಆಂಗ್ಲ ಭಾಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಪಾಸ್ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಶ್ರೇಷ್ಠ ತರಬೇತಿ ನೀಡಿ ಪಾಠ ಬೋಧನೆ ಮಾಡುತ್ತಿರುವ ಕಾರಣಕ್ಕೆ ಶಿವರಾಯಪ್ಪ ಏಳುಕೋಟಿ ಅವರಿಗೆ ಗೌರವ ಪುರಸ್ಕಾರ ನೀಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ