ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ – ನಿಪ್ಪಾಣಿ ತಾಲೂಕಿನ ಪಡಲಿಹಾಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಗ್ರಾಮ ಪರಿಮಿತಿಯಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಗ್ರಾಮದಲ್ಲಿ ೨೦ ಲಕ್ಷ ರೂ. ಅಕ್ಕೋಳ ಗ್ರಾಮದಲ್ಲಿ ೩೦ ಲಕ್ಷ ರೂ. ಮಮದಾಪೂರ ಗ್ರಾಮದಲ್ಲಿ ೩೨ ಲಕ್ಷ ರೂ. ಅನುದಾನದಲ್ಲಿ ಹಾಗೂ ಅಕ್ಕೋಳ ಗ್ರಾಮದಿಂದ ಜತ್ರಾಟ ಸೇತುವೆ ವರೆಗೆ ಸಿಎಮ್‌ಜಿಆರ್‌ವಾಯ್ ಯೋಜನೆಯಡಿ ರಸ್ತೆ ಸುಧಾರಣೆ ೧ ಕಿ.ಮೀ ೧೦೦ ಲಕ್ಷ ರೂ ಗಳು. ರಸ್ತೆ ಸುಧಾರಣೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಯವರು ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮದ ಜನರ ಬಹುದಿನಗಳ ಬೇಡಿಕೆಗೆ ಅನುಗುಣವಾಗಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ನಿಪ್ಪಾಣಿ ಮತಕ್ಷೇತ್ರದ ಎಲ್ಲ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಅವಿರತವಾಗಿ ಶ್ರಮವಹಿಸಲಾಗುವುದೆಂದು ಅವರು ಹೇಳಿದರು. ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತಂದು ಮತಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಮಾದರಿ ಮತಕ್ಷೇತ್ರ ನಿರ್ಮಾಣ ಗುರಿ ಹೊಂದಲಾಗಿದೆ ಎಂದರು.
ಕಳೆದ ೫ ವರ್ಷಗಳಲ್ಲಿ ಮತಕ್ಷೇತ್ರದಲ್ಲಿ ೭೦೦೦ಕ್ಕಿಂತ ಹೆಚ್ಚು ಉಚಿತವಾಗಿ ಉಚಿತ ಗ್ಯಾಸ್ ವಿತರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ೭ ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಹಾಗೂ ೧೧ ಕೋಟಿ ಶಚಾಲಯ ನಿರ್ಮಿಸಿರುವುದಾಗಿ ಹೇಳಿದರು.
ಪಡಲಿಹಾಳ ಗ್ರಾಮದಲ್ಲಿ ೫, ಅಕ್ಕೋಳ ಗ್ರಾಮದಲ್ಲಿ ೧೧, ಮಮದಾಪೂರ ಗ್ರಾಮದಲ್ಲಿ ೧೫, ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಿದರು. ಹಾಗೂ ಪಡಲಿಹಾಳ ಗ್ರಾಮದಲ್ಲಿ ಕನ್ನಡ ಸಂಸ್ಕೃತ ಇಲಾಖೆಯಿಂದ ೧೦ ಲಕ್ಷ ರೂ.ಗಳ ಸಮುದಾಯ ಭವನ ಉದ್ಘಾಟಿಸಿದರು.
ಸುಹಾಸ ಗೂಗೆ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಶಾಸಕರಾದ ಶಶಿಕಲಾ ಜೊಲ್ಲೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಬಹುದಿನಗಳ ಬೇಡಿಕೆಯಾಗಿದ್ದ ಗ್ರಾಮದ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಬೇಡಿಕೆ ಇಡಲಾಗಿದ್ದು, ಅದರಂತೆ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿ ಗ್ರಾಮದ ಜನತೆಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ ಪಂ ಸದಸ್ಯ ಸಿದ್ದು ನರಾಟೆ, ತಾ ಪಂ ಸದಸ್ಯ ದಾದಾಸೊ ನರಗಟ್ಟೆ, ಅಪ್ಪಾಸಾಬ ಸಾಸನೆ, ಶ್ರೀಕಾಂತ ಸಾಸನೆ, ಅಪ್ಪಾಸಾಬ ಕೆಸರಕರ, ರಾವಸಾಬ ಪಾಟೀಲ, ಎಮ್‌ಪಿ ಪಾಟೀಲ, ದಾದಾಸೋ ಶಿಂಧೆ, ಬಾಳಾಸೋ ಕದಮ, ಸಂಜಯ ಅವಟೆ, ಸಂಜಯ ಅವಟೆ, ರಾಜು ಚಗಲೆ, ಪ್ರಕಾಶ ಪಾಟೀಲ, ಜಯದೇವ ಚವ್ವಾಣ, ಪಂಕಜ ಪಾಟೀಲ, ಇಂದ್ರಜಿತ ಕಾಗೆ, ಸುಹಾಸ ಗುಗೆ, ದೀಪಕ ಜಾಧವ, ಸಚಿನ ಪಾಟೀಲ, ದಾದಾ ಮಗದುಮ್ಮ ವಿಕಾಸ ಸಂಕಪಾಳ, ಮನಿಷಾ ರಂಗೋಲೆ, ಸವಿತಾ ಪಾಟೀಲ ಸೇರಿದಂತೆ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ