
ಅಗ್ರ 20 ವಿದ್ಯಾರ್ಥಿಗಳ ಆಯ್ಕೆ
ಪ್ರಗತಿವಾಹಿನಿ ಸುದ್ದಿ: ನಿಪ್ಪಾಣಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಉತ್ತರ ಕರ್ನಾಟಕ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಉತ್ತೇಜಿಸಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗುತ್ತಿರುವ ಶ್ರೀ ಅಣ್ಣಾಸಾಹೇಬ ಜೊಲ್ಲೆ ಸ್ವತಂತ್ರ ವಸತಿ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಥಮ ವರ್ಷದ ದಾಖಲಾತಿಗೋಸ್ಕರ ಶಾಸಕಿ ಶಶಿಕಲಾ ಜೊಲ್ಲೆ ಅವರ ಹೆಸರಿನ ಸುಮಾರು ೬೦ ಲಕ್ಷ ಮೊತ್ತದ ವಿದ್ಯಾರ್ಥಿವೇತನಕ್ಕಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.
ಅಗ್ರ 20 ವಿದ್ಯಾರ್ಥಿಗಳ ಆಯ್ಕೆ : ಬಸವಪ್ರಸಾದ ಜೊಲ್ಲೆ
ಯಕ್ಸಂಬಾದ ಜೊಲ್ಲೆ ಶಿಕ್ಷಣ ಸಂಸ್ಥೆಯ ನಿಪ್ಪಾಣಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲಾಗುತ್ತಿರುವ ಶ್ರೀ ಅಣ್ಣಾಸಾಹೇಬ ಜೊಲ್ಲೆ ಸ್ವತಂತ್ರ ವಸತಿ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಥಮ ವರ್ಷದ ದಾಖಲಾತಿಗೋಸ್ಕರ ಶಾಸಕರಾದ ಶಶಿಕಲಾ ಜೊಲ್ಲೆ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಸುಮಾರು ೬೦ ಲಕ್ಷ ಮೊತ್ತದ ವಿದ್ಯಾರ್ಥಿವೇತನಕ್ಕಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ೮ ಕಡೆ ನಡೆಸಲಾದ ವಿದ್ಯಾರ್ಥಿ ವೇತನ ಪರೀಕ್ಷೆಯ ಫಲಿತಾಂಶವನ್ನು ಮೌಲ್ಯಪಾಮನ ನಂತರ ಪ್ರಕಟಿಸಲಾಗುತ್ತಿದ್ದು ಟಾಪ್ ಮೇರಿಟ್ ಆಧಾರದ ಮೇಲೆ ೨೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜೊಲ್ಲೆ ಗ್ರುಪ್ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಯುವಧುರೀಣ ಬಸವಪ್ರಸಾದ ಜೊಲ್ಲೆ ಹೇಳಿದರು.
ಅವರು ಸೋಮವಾರರಂದು ಯಕ್ಸಂಬಾದ ಶ್ರೀ ಬೀರೇಶ್ವರ ಸಭಾ ಭವನದಲ್ಲಿ ಕರೇದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಸಕ್ತ ವರ್ಷದಿಂದ ಗಡಿಭಾಗದ ಬಡವಿದ್ಯಾರ್ಥಿಗಳಿಗಾಗಿ ನಿಪ್ಪಾಣಿಯಲ್ಲಿ ಸುಸಜ್ಜೀತವಾದ ಕಾಲೇಜು ಸಂಕುಲದಲ್ಲಿ ಪ್ರಾರಂಭಿಸಲಾಗುತ್ತೀರುವ ಅಣ್ಣಾಸಾಹೇಬ ಜೊಲ್ಲೆ ಸ್ವತಂತ್ರ ವಸತಿ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಥಮ ವರ್ಷದ ದಾಖಲಾತಿಗೋಸ್ಕರ ಜ. ೫ ರಿಂದ ಫೆ. ೨ ವರೆಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಿಪ್ಪಾಣಿ, ಯಕ್ಸಂಬಾ, ಹುಕ್ಕೇರಿ, ಯಮಕನಮರಡಿ, ಕಾಗವಾಡ, ಅಥಣಿ, ರಾಯಬಾಗ ಮತ್ತು ಹಾರೂಗೇರಿಯನ್ನು ಒಳಗೊಂಡು ೮ ಪರೀಕ್ಷಾ ಕೇಂದ್ರಗಳಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಹೆಸರಿನ ಸುಮಾರು ೬೦ ಲಕ್ಷ ಮೊತ್ತದ ವಿದ್ಯಾರ್ಥಿವೇತನಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪರೀಕ್ಷೆಯಲ್ಲಿ ಸುಮಾರು ೩ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೌಲ್ಯಮಾಪನ ಪಕ್ರಿಯೆ ನಂತರ ಶ್ರೇಷ್ಠ ಪ್ರದರ್ಶನ ನೀಡಿದ ಅಗ್ರ ೨೦ ವಿದ್ಯಾರ್ಥಿಗಳನ್ನು ಆಯ್ಕೆಮಾಡಲಾಗಿದೆ. ಈ ಆಯ್ಕೆಯಾದ ವಿದ್ಯಾರ್ಥಿಗಳಾದ ಶಿರಗುಪ್ಪಿಯ ಅಭಿನವ ಬೇನಾಡೆ, ನಿಪ್ಪಾಣಿಯ ತನುಷ ವಡಗಾಂವೆ, ಬಸ್ತವಾಡದ ಅಮೃತಾ ಮುದಕಪ್ಪಗೋಳ, ಅಕ್ಕಿವಾಟದ ಪ್ರನವಕುಮಾರ ಮಗದುಮ್ಮ, ಅಥಣಿಯ ಸಾಕ್ಷಿ ಇಚಲಕರಂಜಿ, ಸವದಿಯ ಪ್ರಸನ್ನ ಗುರವ, ಯಮಕನಮರಡಿಯ ಝೈನಾ ಚೌಧರಿ, ಚಿಕ್ಕಾಲಗುಡ್ಡದ ಸಂಕೇತ ಮರಡಿ, ನಿಪ್ಪಾಣಿಯ ತನೀಷ್ಕಾ ಸಪ್ತೆ, ಬೋರಗಲ್ಲದ ಸಮರ್ಥ ಯಶವಂತ, ಅಂಕಲಿಯ ಯಶವಂತ ನಿಕಮ, ಚಿಕ್ಕೋಡಿಯ ಅದಿತ್ಯ ಕರಡೆ, ರಾಯಬಾಗದ ಉದಯ ಬಮ್ಮನ್ನವರ, ನಿಪ್ಪಾಣಿಯ ಸಾಯಿ ಚೌವ್ಹಾನ, ನಾಗನೂರದ ಚಿನ್ಮಯ ನಿಂಬಾಳಕರ, ಮೇಖಳಿಯ ನಿತೇಶ ಬೆಲಸೆ, ಜೂಗುಳದ ಕೃಷ್ಣಾತ ಬಾಗಣೆ, ಮಾಂಜರಿಯ ಶುಭಂ ಸಾವಂತ, ಬೇಡಕಿಹಾಳದ ಪೂರ್ವಾ ಖೋತ, ಖಡಕಲಾಟದ ನೂಪುರ್ ಪಾಟೀಲ ಈ ಪ್ರತಿಭಾವಂತ ವಿದ್ಯಾರ್ಥೀಗಳು ವಿದ್ಯಾರ್ಥಿವೇತನಕ್ಕಾಗಿ ಆಯ್ಕೆಯಾಗಿದ್ದಾರೆ ಇವರ ವಿವರವನ್ನು ಸಂಸ್ಥೆಯ ಅಧಿಕೃತ ವೆಬಸೈಟ್ನಲ್ಲಿಯೂ ಕೂಡ ಪ್ರಕಟಿಸಲಾಗಿದೆ. ಪೋಷಕರು, ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ೯೭೩೧೩೦೯೫೫೪ ಸಂಪರ್ಕಿಸಲು ಕೋರಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಅವರು ಅಭಿನಂದಿಸಿದ್ದಾರೆ ಎಂದು ತಿಳಿಸಿದ ಬಸವಪ್ರಸಾದ ಉತ್ತರ ಕರ್ನಾಟಕದ ಬಡ ವಿದ್ಯಾರ್ಥಿಗಳಿಗಾಗಿ ಮತ್ತಷ್ಟು ವೈಜ್ಞಾನಿಕ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಉತ್ತೇಜಿಸುವ ಧ್ಯೆಯದೊಂದಿಗೆ ಜೊಲ್ಲೆ ಗ್ರುಪ್ ಸಂಸ್ಥಾಪಕ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸುಮಾರು ೩೦ ವರ್ಷಗಳ ನಿಸ್ವಾರ್ಥ ಸೇವೆಯನ್ನು ಮನಗಂಡು ಗಡಿಜನರು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯವರು ಸೂಚಿಸಿದಂತೆ ಅವರ ಹೆಸರನ್ನೇ ಕಾಲೇಜಿಗೆ ಇಡಲು ನಿಶ್ಛಯಿಸಿ ಸಂಸ್ಥಾಪಕರು ಕಂಡ ಕನಸನ್ನು ನಮ್ಮ ಕಾಲೇಜು ಬರುವ ಶೈಕ್ಷಣಿಕ ವರ್ಷದಿಂದ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಆ ನಿಟ್ಟಿನಲ್ಲಿ ಈ ಭಾಗದ ಪ್ರತಿಭಾವಂತ ಹಾಗೂ ಅರ್ಹ ವಿದ್ಯಾರ್ಥೀಗಳಿಗೆ ಆರ್ಥೀಕ ನೇರವನ್ನು ಒದಗಿಸುವುದರ ಮೂಲಕ ಗುಣಾತ್ಮಕ ಶಿಕ್ಷಣವನ್ನು ಯಾವುದೇ ನಿರ್ಬಂಧವಿಲ್ಲದೇ ಪ್ರೋತ್ಸಾಹಿಸುವ ನಮ್ಮ ಬಧ್ಧತೆಯನ್ನು ಪ್ರತಿಬಿಂಬಿಸುವುದಕ್ಕಾಗಿ ನಿಪ್ಪಾಣಿ ಶಾಸಕರಾದ ೬೦ ಲಕ್ಷ ಶಿಷ್ಯವೇತನ ನೀಡಿದ್ದಾರೆ, ಅವರು ಹೆಳಿದಂತೆ ಈ ವರ್ಷದ ಪರೀಕ್ಷೆಯಲ್ಲಿ ಅಸಾಧರಣ ಪ್ರತಿಭೆಗಳನ್ನು ನೋಡಲು ನಮಗೆ ಸಂತೋಷವಾಗಿದ್ದು ಶಿಷ್ಯವೇತನವು ವಿದ್ಯಾರ್ಥೀಗಳ ಶೈಕ್ಷಣಿಕ ಕನಸುಗಳನ್ನು ಪೂರ್ಣಗೊಳಿಸಲು ಸಹಾಯ ಮಾಡಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೊಲ್ಲೆ ಶಿಕ್ಷಣ ಸಂಸ್ಥೆಯ ಇವೇಂಟ್ ಡೈರೆಕ್ಟರ್ ವಿಜಯ ರಾವುತ, ಶೈಕ್ಷಣಿಕ ಆಡಳಿತಾಧಿಕಾರಿ ಶಿರೀಷ ಕೆರೂರ, ಪ್ರಾಚಾರ್ಯರಾದ ದೀಪಕ ಪಾಟೀಲ, ಸಂಯೋಜಕ ಎಮ್, ಎಮ್. ಪಾಟೀಲ, ಪದವಿಕಾಲೇಜಿನ ಪ್ರಾಚಾರ್ಯ ರಾಕೇಶ ಮಗದುಮ್ಮ, ಎ.ವ್ಹಿ.ಕುಲಕರ್ಣಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ