
ಪ್ರಗತಿವಾಹಿನಿ ಸುದ್ದಿ: ಫೆ.22 ರಂದು ತೆಲಂಗಾಣದ ಶ್ರೀಶೈಲಂನಿಂದ ದೇವರಕೊಂಡಕ್ಕೆ ನೀರು ಸಾಗಿಸಲು ನಿರ್ಮಿಸಲಾಗುತ್ತಿರುವ ಎಡದಂಡೆ ಕಾಲುವೆ ಸುರಂಗದಲ್ಲಿ ಕುಸಿತ ಉಂಟಾಗಿ ಎಂಟು ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದು ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ದೃಡಪಡಿಸಲಾಗಿದೆ.
ಸುರಂಗದೊಳಗಿನ ಸೋರಿಕೆ ಸರಿಪಡಿಸಲು 50 ಜನರಿದ್ದ ಕಾರ್ಮಿಕರ ಗುಂಪು ತೆರಳಿತ್ತು. ಆದರೆ ಕಾರ್ಯಾಚರಣೆ ವೇಳೆ ಸುರಂಗದ ಮೇಲ್ಬಾಗದ 10 ಮೀ. ವ್ಯಾಪ್ತಿಯ ಪ್ರದೇಶ ಏಕಾಏಕಿ ಕುಸಿದಿದ್ದು 200 ಮೀ.ಗೂ ಹೆಚ್ಚು ಪ್ರದೇಶದಲ್ಲಿ ಮಣ್ಣು ಬಿದ್ದಿತ್ತು.
ಈ ಘಟನೆಯಲ್ಲಿ 42 ಕಾರ್ಮಿಕರು ಸುರಂಗದಿಂದ ಹೊರ ಬಂದಿದ್ದು ಎಂಟು ಜನ ಸುರಂಗದೊಳಗೆ ಸಿಲುಕಿದ್ದರು. ಇದೀಗ ಘಟನೆ ಸಂಭವಿಸಿ 6 ದಿನಕ್ಕೆ ಕಾಲಿಟ್ಟಿದ್ದು ಸುರಂಗದಲ್ಲಿ ಸಿಲುಕಿದ್ದ ಎಲ್ಲಾ ಎಂಟು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಸ್ಥಳದಲ್ಲಿ ಎನ್ ಡಿ ಆರ್ ಎಫ್, ಸಿಡಿಆರ್ ಎಫ್ ಸಿಬ್ಬಂದಿ ಸೇರಿದಂತೆ ರಕ್ಷಣಾ ತಂಡ ಸುರಂಗದೊಳಗೆ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಡುತ್ತಿದ್ದು ಇಂದು ಹೊರತೆಗೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ