
ಪ್ರಗತಿವಾಹಿನಿ ಸುದ್ದಿ: ಕೊಡಗು ಜಿಲ್ಲೆಯಲ್ಲಿರುವ ಬಂಡೀಪುರದಲ್ಲಿ ವಾಸ್ತವ್ಯ ಹೂಡಿದ್ದ ಬೆಂಗಳೂರು ಮೂಲದ ಕುಟುಂಬವೊಂದು ಲಗೇಜ್ ಎಲ್ಲವನ್ನೂ ರೆಸಾರ್ಟ್ ನಲ್ಲೇ ಬಿಟ್ಟು ಏಕಾಏಕಿ ಕಾಣೆಯಾಗಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ರಜೆಯ ಹಿನ್ನಲೆ ಭಾನುವಾರದಂದು ಬೆಂಗಳೂರು ಮೂಲದ 40 ವರ್ಷದ ಜೆ. ನಿಶಾಂತ್ ಸೇರಿದಂತೆ ಅವರ ಪತ್ನಿ ಚಂದನಾ ಹಾಗೂ 10 ವರ್ಷದ ಮಗನೊಂದಿಗೆ ಬಂಡೀಪುರದ ಕಂಟ್ರಿ ಕ್ಲಬ್ ರೆಸಾರ್ಟ್‌ವೊಂದಕ್ಕೆ ಬಂದಿದ್ದರು. ಆದರೆ ಸೋಮವಾರ ತರಾತುರಿಯಲ್ಲಿ ಕಾರಿನಲ್ಲಿ ಹೊರಟಿದ್ದಾರೆ. ಇದಾದ ಬಳಿಕ ಕುಟುಂಬ ಮತ್ತೆ ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲದೆ ಕುಟುಂಬದ ಲಗೇಜ್ ಕೂಡ ರೆಸಾರ್ಟ್ ನಲ್ಲೇ ಬಿಟ್ಟು ಹೋಗಿದ್ದಾರೆ.
ಸದ್ಯ ನಿಶಾಂತ್ ಕುಟುಂಬ ಬಂಡೀಪುರ- ಮಂಗಲ ರಸ್ತೆಯಲ್ಲಿ ಕುಟುಂಬ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಸಾಲದ ಬಾಧೆಯಿಂದ ತಪ್ಪಿಸಿಕೊಳ್ಳಲು ನಿಶಾಂತ್ ತಮ್ಮ ಕುಟುಂಬದೊಂದಿಗೆ ಬಂಡೀಪುರಕ್ಕೆ ಬಂದಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಇಷ್ಟೇ ಅಲ್ಲದೆ ನಾನೊಬ್ಬ ಬಿಬಿಎಂಪಿ ನೌಕರ ಎಂದು ಸುಳ್ಳು ಹೇಳಿ ಖಾಸಗಿ ರೆಸಾರ್ಟ್‌ನಲ್ಲಿ ರೂಮ್ ಬಾಡಿಗೆಗೆ ಪಡೆದಿದ್ದು ಇದೀಗ ಬೆಳಗ್ಗೆಯಾಗುದರೊಳಗೆ ನಾಪತ್ತೆಯಾಗಿದ್ದು, ಸಾಲಗಾರರು ಅಪಹರಿಸಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಗುಂಡ್ಲುಪೇಟೆ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಾಪತ್ತೆಯಾದ ಕುಟುಂಬಕ್ಕಾಗಿ ತಮಿಳುನಾಡು, ಕೇರಳ ಮತ್ತು ಮೈಸೂರು ಸೇರಿದಂತೆ ಹಲವು ಕಡೆ ಪೊಲೀಸರು ಶೋಧ ಕಾರ್ಯ ಮುಂದುವರೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ