Kannada NewsKarnataka NewsLatest

*ಮೊಬೈಲ್ ಕೊಡಿಸಿಲ್ಲ ಎಂದು ಮನೆ ಬಿಟ್ಟು ಹೋದ ಬಾಲಕ*

ಪ್ರಗತಿವಾಹಿನಿ ಸುದ್ದಿ: ಮೊಬೈಲ್ ಫೋನ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಬಾಲಕನೊಬ್ಬ ಮನೆ ಬಿಟ್ಟು ಹೋಗಿದ್ದು, ಪೋಷಕರು ಕಂಗಾಲಾಗಿರುವ ಘಟನೆ ಬಾಗಲಕೋಟೆಯ ಗದ್ದನಕೇರಿ ಗ್ರಾಮದಲ್ಲಿ ನಡೆದಿದೆ.

Home add -Advt

10ನೇ ತರಗತಿ ವಿದ್ಯಾರ್ಥಿ ಶ್ರವಣಕುಮಾರ್ ತಳವಾರ ಮನೆ ಬೀಟ್ಟು ಹೊಗಿರುವ ವಿದ್ಯಾರ್ಥಿ. ಐಫೋನ್ ಕೊಡಿಸುವಂತೆ ಪೋಷಕರ ಬಳಿ ಕೆಳಿದ್ದನಂತೆ ಇದಕ್ಕೆ ಪೋಷಕರು ನಿರಾಕರಿಸಿದ್ದಾರೆ. ಮನನೊಂದ ಬಾಲಕ ಮನೆ ಬಿಟು ಹೋಗಿದ್ದಾನೆ.

ಮನೆಯಲ್ಲಿದ್ದ 800 ರೂಪಾಯಿ ತೆಗೆದುಕೊಂಡು ಹೋಗಿರುವ ಬಾಲಕ ಕಳೆದ ಶನಿವಾರದಿಂದ ಮನೆಗೆ ವಾಪಾಸ್ ಆಗಿಲ್ಲ. ಮಗನಿಗಾಗಿ ಕಾದು ಕಾದು ಕಂಗಾಲಾಗಿರುವ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.


Related Articles

Back to top button