Belagavi NewsBelgaum NewsKarnataka News

*ಸಾಂಪ್ರದಾಯಿಕ ಹಾಗೂ ಆಧುನಿಕ ಔಷಧ ಜೊತೆಗೂಡಿಸಿ ಅನಾರೋಗ್ಯವನ್ನು ಹೋಗಲಾಡಿಸಬೇಕು: ಡಾ. ಪ್ರಭಾಕರ ಕೋರೆ*

ಪ್ರಗತಿವಾಹಿನಿ ಸುದ್ದಿ: ಸಾಂಪ್ರದಾಯಿಕ ಔಷಧ ಪದ್ಧತಿ ಹಾಗೂ ಆಧುನಿಕ ವೈದ್ಯ ವಿಜ್ಞಾನದ  ಔಷಧ ಜೊತೆಗೂಡಿ ಅನಾರೋಗ್ಯವನ್ನು ಹೋಗಲಾಡಿಸುವ ಕಾರ್ಯವಾಗಬೇಕು. ಇವೆರಡೂ ಜೊತೆಗೂಡಿ ಕಾರ್ಯನಿರ್ವಹಿಸಿದರೆ ವೈದ್ಯವಿಜ್ಞಾನದಲ್ಲಿ ಸಾಕಷ್ಟು ಯಶಸ್ಸು ಸಾಧಿಸಬಹುದು ಎಂದು ಕಾಹೆರನ ಕುಲಪತಿ ಹಾಗೂ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರಿಂದಿಲ್ಲಿ ಹೇಳಿದರು.

ಕಾಹೆರ, ಕೆಎಲ್ಇ ಫಾರ್ಮಾಸಿ (ಔಷಧ) ಮಹಾವಿದ್ಯಾಲಯವು ಬೆಳಗಾವಿಯಲ್ಲಿ ಏರ್ಪಡಿಸಿದ್ದ ಎಸ್ಎಫ್ಇಯ 12ನೇ ಅಂತರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚುತ್ತಿರುವ  ಔಷಧೀಯ ಬೇಡಿಕೆಯನ್ನು ಸಮಯಕ್ಕೆ ಅನುಗುಣವಾಗಿ ಸಂಶೋಧನಾ ಪರಿಣಾಮಗಳು ಪೂರೈಸುವಂತಾಗಬೇಕು.  ಅಲೋಪತಿ, ಆಯುರ್ವೇದ  ಹಾಗೂ ಇನ್ನೀತರ ಸಾಂಪ್ರದಾಯಿಕ ಔಷಧಿಗಳು ಜೊತೆಯಾಗಿ ಕಾರ್ಯನಿರ್ವಹಿಸಿ ಯಶಸ್ಸು ಕಂಡಿದ್ದು, ಆರೋಗ್ಯ ಕ್ಷೇತ್ರದಲ್ಲಿ ಭರವಸೆ ಮೂಡಿಸಿದೆ. ಸಾಂಪ್ರದಾಯಿಕ ಔಷಧ ತಂತ್ರಜ್ಞಾನದಲ್ಲಿ ಹೂಡಿಕೆ ಹೆಚ್ಚಾಗಿ ಅಲೋಪಥಿ ಔಷಧದಂತೆ ಬೃಹತ ಉದ್ಯಮವಾಗುವಂತಾಗಬೇಕು. ಆಸ್ಪತ್ರೆಗಳು ಕೂಡ ಔಷಧ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟು ಸಂಶೋಧನೆಗೆ ಹೂಡಿಕೆ ಮಾಡಬೇಕು.  ಭಾರತದಾದ್ಯಂತ ಇರುವ ಸಾಂಪ್ರಾದಯಿಕ ಹಾಗೂ ಆಧುನಿಕ ವೈದ್ಯಪದ್ದತಿ ಔಷಧ ತಯಾರಿಸುವ ಉದ್ಯಮಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪರಿಣತರ ಸಹಕಾರದಿಂದ ಸಾಮಾಜಿಕ ಆರೋಗ್ಯವನ್ನು ಸುಧಾರಿಸಲು ಮುಂದೆ ಬರಬೇಕೆಂದು ಕರೆ ನೀಡಿದರು. ಪ್ರಧಾನ ಮಂತ್ರಿಗಳ ಆಶಯದಂತೆ ಔಷಧ ಉದ್ಯಮವು ಪ್ರಗತಿ ಹೊಂದಿ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಔಷಧ ಲಭಿಸುವಂತಾಗಬೇಕು. ಭಾರತವು ನಿರ್ದಿಷ್ಟವಾಗಿ ಉದ್ಯಮ ಮತ್ತು ಆರೋಗ್ಯ ರಕ್ಷಣೆಯಲ್ಲಿ ಸಾಕಷ್ಟು ಬೆಳೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಎಸ್ ಎಫ್ ಇ ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಫುಲೋಕ ಮುಖರ್ಜಿ  ಅವರು ಮಾತನಾಡಿ, ಗ್ರಾಮೀಣ ಭಾರತದದಲ್ಲಿ ಇನ್ನೂ ಕೂಡ ಕೆಲವು ಪ್ರದೇಶಗಳಲ್ಲಿ ಸರಿಯಾದ ಔಷಧಿಗಳ ಅಲಬ್ಯತೆ ಹೆಚ್ಚಾಗಿ ಕಾಡುತ್ತಿದೆ. ಕೇವಲ ವೈದ್ಯರಿದ್ದರೆ ಸಾಲದು ಅದಕ್ಕೆ ತಕ್ಕಂತೆ ಔಷಧಗಳೂ ಕೂಡ ಕೈಗೆಟಕುವ ದರದಲ್ಲಿ ಸಿಗುವಂತಾಗಬೇಕು. ಆದ್ದರಿಂದ ಗ್ರಾಮೀಣ ಜನತೆಯ ಮನೆಬಾಗಿಲಿಗೆ ವೈದ್ಯಕೀಯ ಸೇವೆಯೊಂದಿಗೆ ಸಕಲ ಔಷಧಿಗಳು ನಿರಂತರವಾಗಿ ದೊರೆಯುಂವತಾಗಬೇಕು. ಆದಕ್ಕಾಗಿ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆಗಳು ಕೈಜೋಡಿಸಿ ಜನರ ಆರೋಗ್ಯವನ್ನು ಕಾಪಾಡಬೇಕು ಎಂದರು.

ಎಸ್ ಎಫ್ ಇ ಸಂಸ್ಥೆಯ ಉಪಾದ್ಯಕ್ಷ ಡಾ. ಸಿ ಕೆ ಕಟಿಯಾರ ಅವರು ಮಾತನಾಡಿ, ಆರೋಗ್ಯ ರಕ್ಷಣೆಯಲ್ಲಿ ಔಷಧಿಗಳ ಪಾತ್ರ ಅತ್ಯಂತ ಮುಖ್ಯವಾಗಿದ್ದು ನಿರಂತರವಾದ ಸಂಶೋಧನೆಗಳ ಮೂಲಕ ಆಧುನಿಕ ವೈದ್ಯಪದ್ದತಿ ಹಾಗೂ ಸಾಂಪ್ರಾದಯಿಕ ಔಷಧಿಗಳ ಬಳಕೆಯನ್ನು ಅಗತ್ಯಕ್ಕೆ ಅನುಗುಣವಾಗಿ ಬಳಸುವ ಮತ್ತು ಅದರ ಕುರಿತು ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು.

Home add -Advt

ಸಮ್ಮೇಳನದ ಸಂಘಟನಾಧ್ಯಕ್ಷರಾದ ಡಾ. ಸುನಿಲ್ ಎಸ್ ಜಲಾಲ್‌ಪುರೆ ಅವರು ಸ್ವಾಗತಿಸಿ, ಪರಿಚಯಿಸಿದರು. ಸಮಾರಂಭದಲ್ಲಿ ಕಾಹೆರನ ಉಪ ಕುಲಪತಿ ಡಾ. ನಿತಿನ್ ಎಂ. ಗಂಗಾನೆ, ಅಸ್ಟ್ರಿಯಾದ ಫ್ರಮಾಸಿಟ್ಯುಕಲ್ ಸೈನ್ಸ್ ಯುನಿವರಸಿಟಿ ಆಫ್ ಗ್ರಜನ ಪ್ರೊ. ರುಡಾಲ್ಫ ಬಾಯುರ, ಐಸಿಎಂಆರ್ ನಿರ್ದೇಶಕ ಡಾ. ಸುಬರ್ಣಾ ರಾಯ್, ಎಸ್ ಎಫ್ ಇ ಸಂಸ್ಥೆಯ ಅಧ್ಯಕ್ಷೆ ಪ್ರೊ. ನಮೃತಾ ಲಾಲ್, ಉಪಾಧ್ಯಕ್ಷ ಇಂದ್ರನೀಲ್ ದಾಸ್, ಡಾ. ಎಂ.ಎಸ್. ಗಣಾಚಾರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಪ್ರಮೋದ ಹುರಕಡ್ಲೆ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button