ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶತಮಾನಗಳ ರಾಮಜನ್ಮ ಭೂಮಿ ವಿವಾದಕ್ಕೆ ಅಂತ್ಯ ಹಾಡಿರುವ ಸರ್ವೋಚ್ಛ ನ್ಯಾಯಲಯದ ತೀರ್ಪು ಐತಿಹಾಸಿಕವಾದದ್ದು. ಇಷ್ಟು ಸುದೀರ್ಘವಾದ ವಿವಾದಕ್ಕೆ ಒಂದೇ ತೀರ್ಪಿನಲ್ಲಿ ಅಂತ್ಯ ಹಾಡಿರುವುದು ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಿಸಬೇಕಾದ ಕ್ಷಣ ಇದು ಎಂದು ವಿಧಾನಪರಿಷತ್ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಪ್ರತಿಕ್ರಿಯಿಸಿದ್ದಾರೆ.
ಸುಪ್ರಿಂ ಕೋರ್ಟ್ ತೀರ್ಪು ಈ ರೀತಿ ಎಲ್ಲರೂ ಒಪ್ಪುವಂತಿರುತ್ತದೆ ಎನ್ನುವ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಎಲ್ಲರಲ್ಲೂ ಭಯದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಯಾವುದಕ್ಕೂ ಅವಕಾಶ ನೀಡದೆ ಎಲ್ಲರೂ ತಲೆ ಭಾಗಿ ಗೌರವಿಸುವಂತಹ ತೀರ್ಪನ್ನು ಸುಪ್ರಿಂ ಕೋರ್ಟ್ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ