Kannada NewsKarnataka NewsLatest

ಅಯೋಧ್ಯೆಯಲ್ಲೇ ರಾಮನ ವನವಾಸ ಅಂತ್ಯವಾದಂತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶತಮಾನಗಳ ವಿವಾದಕ್ಕೆ ಅಂತ್ಯ ಹಾಡಿರುವ ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಎಲ್ಲೆಡೆ ಸ್ವಾಗತ ವ್ಯಕ್ತವಾಗಿದೆ. ಸರ್ವರೂ ಒಪ್ಪುವಂತಹ ತೀರ್ಪನ್ನು ನ್ಯಾಯಾಲಯ ನೀಡಿದೆ. ಇದರಿಂದಾಗಿ ವಿವಾದ ಮುಗಿದಂತಾಗಿದೆ ಎಂದು ಅನೇಕರ ಸಂತಸ ವ್ಯಕ್ತಪಡಿಸಿದ್ದಾರೆ.

ದೇಶದ ಜನರನ್ನು ಒಗ್ಗೂಡಿಸುವ ತೀರ್ಪು

ದಶಕಗಳಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂದು ಸಾಧು, ಸಂತರು ದೇಶದ ಕೋಟ್ಯಂತರ ಜನರು ಎದುರು ನೋಡುತ್ತಿದ್ದರು. ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ಸ್ವಾಗತಾರ್ಹ. ಅಯೋಧ್ಯೆಯಲ್ಲೇ ಶ್ರೀರಾಮನ ವನವಾಸ ಅಂತ್ಯವಾದಂತೆ ಆಗಿದೆ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಯೋಧ್ಯೆ ತೀರ್ಪುನ್ನು ಸ್ವಾಗತಿಸಿದ್ದಾರೆ.

ಇದು ದೇಶದ ಜನರನ್ನು ಒಗ್ಗೂಡಿಸುವ ತೀರ್ಪು. ಹಿಂದು ಜನರ ಭಾವನೆಗೆ ಸ್ಪಂದಿಸುವುದರ ಜತೆಗೆ ಮುಸ್ಲಿಂ ಸಮುದಾಯದವರಿಗೂ ಅಯೋಧ್ಯೆಯಲ್ಲಿ ಕೇಂದ್ರ ಸರಕಾರ ಐದು ಎಕರೆ ಜಾಗ ನೀಡಿ ಮಸೀದಿ ನಿರ್ಮಾಣ ಮಾಡಲು ಸೂಚಿಸಿರುವುದು ಎರಡೂ ಸಮುದಾಯದವರಿಗೆ ಈ ತೀರ್ಪು ಮುದ ನೀಡಿದೆ. ಸುಮಾರು ನಾಲ್ಕು ನೂರು ವರ್ಷಗಳಿಂದ ವಿವಾದದಿಂದ ಕೂಡಿದ ರಾಮ ಜನ್ಮಭೂಮಿಯ ತೀರ್ಪನನ್ನು ಭಾರತದ ಸರ್ವೋಚ್ಚ ನ್ಯಾಯಾಲಯ ಎರಡೂ ಸಮುದಾಯದವರಿಗೆ ಸಮಾನವಾದ ನ್ಯಾಯ ನೀಡಿದೆ. ದೇಶದಲ್ಲಿ ಎಲ್ಲರೂ ಸಮಾನತೆಯಿಂದ ಸಹೋದರಂತೆ ಬಾಳ್ವೆ ಮಾಡಬೇಕು ಎಂದು ಶ್ರೀಗಳು ಈ ಮೂಲಕ ಮನವಿ ಮಾಡಿದ್ದಾರೆ.

ಶೀಘ್ರ ಮಂದಿರ ನಿರ್ಮಾಣವಾಗಲಿ

ರಾಮಜನ್ಮ ಭೂಮಿಯ ಶತಮಾನದ ವಿವಾದವನ್ನು ಬಗೆಹರಿಸಿರುವ ಸರ್ವೋಚ್ಛ ನ್ಯಾಯಾಲಯದ ತೀರ್ಪು ಎಲ್ಲರಿಗೂ ಖುಷಿ ನೀಡಿದೆ ಎಂದು ಉದ್ಯಮಿ, ಎಂ ಸ್ಯಾಂಡ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಪಾಂಡುರಂಗ ರಡ್ಡಿ ಪ್ರತಿಕ್ರಿಯಿಸಿದ್ದಾರೆ.

ತೀರ್ಪಿನ ನಂತರ ರಾಷ್ಟ್ರದಲ್ಲಿ ಏನಾಗುತ್ತದೆಯೋ ಎನ್ನುವ ಆತಂಕ ಎಲ್ಲರಲ್ಲಿತ್ತು. ಆದರೆ ತೀರ್ಪು ಎಲ್ಲರಿಗೂ ಖುಷಿ ತಂದಿದೆ. ಸರಕಾರ ಆದಷ್ಟು ಶೀಘ್ರ ರಾಮಮಂದಿರ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಶಿಸಿದ್ದಾರೆ.

 

ಇತಿಶ್ರೀ ಹಾಡಿದೆ

ರಾಮಮಂದಿರ ನಿರ್ಮಾಣಕ್ಕೆ ಸುಪ್ರಿಂ ಕೋರ್ಟ್ ಹಸಿರುವ ನಿಶಾನೆ ತೋರಿಸಿರುವುದು ಸಂತಸ ತಂದಿದೆ. ಇಲ್ಲದ ವಿವಾದ ಹುಟ್ಟುಹಾಕಿ ರಾಷ್ಟ್ರದಲ್ಲಿ ಶಾಂತಿ ಕದಡುವ ಯತ್ನ ನಡೆದಿತ್ತು. ಈಗಿನ ತೀರ್ಪು ಅದೆಲ್ಲದಕ್ಕೂ ಇತಿಶ್ರೀ ಹಾಡಿದೆ ಎಂದು ಬಿಜೆಪಿ ಬೆಳಗಾವಿ ಮಹಾನಗರ ಪ್ರಧಾನ ಕಾರ್ಯದರ್ಶಿ ಕಿರಣ ಜಾಧವ ಪ್ರತಿಕ್ರಿಯಿಸಿದ್ದಾರೆ.

ಸರಕಾರ ಆದಷ್ಟು ಬೇಗ ರಾಮಮಂದಿರ ನಿರ್ಮಾಣ ಮಾಡುವ ಮೂಲಕ ಕೋಟ್ಯಾಂತರ ಹಿಂದುಗಳ ಭಾವನೆಯನ್ನು ಗೌರವಿಸಲಿದೆ ಎನ್ನುವ ವಿಶ್ವಾಸವಿದೆ. ಇನ್ನು ಮುಂದಾದರೂ ಎಲ್ಲರೂ ಸಹಬಾಳ್ವೆಯಿಂದ ಬಾಳುವುದಕ್ಕೆ ಮುಸ್ಲಿಮರು ಕೂಡ ಸಹಕಾರ ನೀಡಬೇಕು. ರಾಜಕೀಯಕ್ಕಾಗಿ ವಿವಾದಗಳನ್ನು ಹುಟ್ಟುಹಾಕುವವರಿಗೆ ಅವಕಾಶ ಕೊಡಬಾರು ಎಂದು ಅರು ವಿನಂತಿಸಿದ್ದಾರೆ.

ಸಮಾಧಾನ ತಂದಿದೆ

ಸರ್ವೋಚ್ಛ ನ್ಯಾಯಾಲಯ ನೀಡಿರುವ ರಾಮಜನ್ಮ ಭೂಮಿ ಕುರಿತ ಐತಿಹಾಸಿಕ ತೀರ್ಪು ಎಲ್ಲರಲ್ಲೂ ಸಮಾಧಾನ ತಂದಿದೆ ಎಂದು ಬಿಜೆಪಿ ಮಹಾನಗರ ಜಿಲ್ಲಾ  ಅಧ್ಯಕ್ಷ ರಾಜೇಂದ್ರ ಹರಕುಣಿ ಹೇಳಿದ್ದಾರೆ.

ದೇಶದ ಕೋಟ್ಯಂತರ ಬಹುಸಂಖ್ಯಾತರು ಶತಮಾನಗಳಿಂದ ಇಂತಹ ತೀರ್ಪಿಗಾಗಿ ಕಾಯುತ್ತಿದ್ದರು. ಅವರ ಬಾವನೆಗಳಿಗೆ ಗೌರವ ಸಿಕ್ಕಂತಾಗಿದೆ. ಕೇಂದ್ರ ಸರಕಾರದ ತೀರ್ಪನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳುವ ಮೂಲಕ ಎಲ್ಲರಿಗೂ ಖುಷಿ ನೀಡಲಿದೆ ಎನ್ನುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.

 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button