
ಪ್ರಗತಿವಾಹಿನಿ ಸುದ್ದಿ: ವಿಜಯಪುರ ಎಪಿಎಮ್‌ಸಿ ಪೊಲೀಸ್ ಠಾಣೆ ಹಾಗೂ ವಿಜಯಪುರದ ಇಂಡಸ್ಟ್ರೀಯಲ್ ಏರಿಯಾ ಕೆ.ಐ.ಎ.ಡಿ.ಬಿ ಬಳಿ ದಾಳಿ ನಡೆಸಿದ ಪೊಲೀಸರು, ನಯೀಮ್ ಸಿರಾಜ್ ಶಾಮಣ್ಣವರ ಎಂಬಾತನನ್ನು ವಶಕ್ಕೆ ಪಡೆದಿದ್ದು, ಆತನ ಬಳಿ ಇದ್ದ ಅನಧಿಕೃತ ಪಿಸ್ತೂಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ವಿಜಯಪುರದ ಇಂಡಿ ತಾಲೂಕಿನ ಹವೇಲಿ ಗಲ್ಲಿ ನಿವಾಸಿಯಾಗಿರುವ ನಯೀಮ್ ಸಿರಾಜ್ ಬಳಿ ಅನಧೀಕೃತವಾಗಿ ಇಟ್ಟುಕೊಂಡಿದ್ದ 01 ಕಂಟ್ರಿ ಪಿಸ್ತೂಲ್ ಹಾಗೂ 01 ಸಜೀವ ಗುಂಡು ಜಪ್ತಿ ಮಾಡಿಲಾಗಿದ್ದು, ಈ ಬಗ್ಗೆ ಎಪಿಎಮ್‌ಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 22/2025. ಕಲಂ: 25(1)(a), 25(1a), 29(a), 29(b) -1959 2 6 ಅಡಿ ಪ್ರಕರಣ ದಾಖಲಾಗಿದೆ.
ಆರೋಪಿತನಿಗೆ ವಿಚಾರಣೆ ಮಾಡಿದಾಗ ಇನ್ನೂ ಇಬ್ಬರಿಗೆ ಕಂಟ್ರಿ ಪಿಸ್ತೂಲ್‌ಗಳನ್ನು ಪೂರೈಸಿರುವುದಾಗಿ ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿದ್ದು, ಇನ್ನು ಮೂವರು ಆರೋಪಿಗಳನ್ನು ಬಂಧಿಸಿ ಒಟ್ಟು 5 ಕಂಟ್ರಿ ಪಿಸ್ತೂಲ್ ಗಳನ್ನು ವಶಕ್ಕೆ ಪದೆಯಲಾಗಿದೆ.
ಬಂಧಿತರನ್ನು ನಿಹಾಲ @ ನೇಹಾಲ್ ಮಹಿಬೂಬಸಾಬ ತಾಂಬೋಳಿ ( 25) ವಿಜಯಪುರದ ಭವಾನಿ ನಗರ ನಿವಾಸಿ,ಈತನಿಂದ 3 ಕಂಟ್ರಿ ಪಿಸ್ತೂಲ್ ಹಾಗೂ 4 ಸಜೀವ ಗುಂಡು, ಸಿದ್ದು @ ಸಿದ್ಯಾ ಗುರುಪಾದ ಮೂಡಲಗಿ @ ಮೂಡಂಗಿ ( 29 ) ಯೋಗಾಪೂರ ಕಾಲೋನಿ, ಈತನಿಂದ 1 ಕಂಟ್ರಿ ಪಿಸ್ತೂಲ್ ಹಾಗೂ 1 ಸಜೀವ ಗುಂಡು, ಈ ರೀತಿ ಮೂರು ಜನ ಆರೋಪಿತರಿಂದ ಒಟ್ಟು 05 ಕಂಟ್ರಿ ಪಿಸ್ತೂಲ್ ಹಾಗೂ 06 ಸಜೀವ ಗುಂಡುಗಳನ್ನು ಜಪ್ತಿ ಮಾಡಲಾಗಿದೆ.
ವಿಜಯಪುರ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶಂಕರ ಮಾರಿಹಾಳ ಮತ್ತು ರಾಮನಗೌಡ ಹಟ್ಟಿ ಹಾಗೂ ಡಿಎಸ್‌ಪಿ ಬಸವರಾಜ ಯಲಿಗಾರ ರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯಲ್ಲಿ ಪ್ರಕರಣದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳಾದ ಮಲ್ಲಯ್ಯ ಮಠಪತಿ, ಸಿಪಿಐ ಗೋಲಗುಂಬಜ್ ವೃತ್ತ, ಜ್ಯೋತಿ ಖೋತ, ಪಿಎಸ್‌ಐ ಎಪಿಎಮ್‌ಸಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಜನರಾದ ಆಸಿಫ್, ಎ. ಗುಡಗುಂಟಿ ಸಿಎಚ್‌ಸಿ-409, ಸಂತೋಷ ಮೇಲಸಕ್ಕರಿ ಸಿಪಿಸಿ-1893, ರಮೇಶ ಜಾಧವ ಸಿಪಿಸಿ-1875, ಎಸ್.ಎ.ಬನಪಟ್ಟಿ ಸಿಪಿಸಿ-1502, ಆಸೀಫ್ ಲಷ್ಕರಿ ಸಿಪಿಸಿ-1802, ಯೋಗೇಶ ಮಾಳಿ ಸಿಪಿಸಿ-1745, ಭೀಮಾಶಂಕರ ಮಖಣಾಪೂರ ಸಿಪಿಸಿ-1751, ಆನಂದ ಹಿರೇಕುರಬರ ಸಿಪಿಸಿ-1887. ಎಸ್.ಎ.ಪೂಜಾರಿ ಸಿಪಿಸಿ-739, ಎಸ್.ಬಿ.ತೆಲಗಾಂವ ಸಿಪಿಸಿ-1614, ಎಸ್.ಎಸ್.ಬಿರಾದಾರ ಸಿಪಿಸಿ-1873, ಶ್ರೀಕಾಂತ ಪೂಜಾರಿ ಸಿಪಿಸಿ-1858 ಇವರುಗಳ ಕರ್ತವ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.