Kannada NewsKarnataka NewsLatest

ಲಕ್ಷ್ಮಿ ಹೆಬ್ಬಾಳಕರ್ ಗೆ ಯಾವ ಸ್ಥಾನವನ್ನೂ ಕೊಡಬಾರದೆಂದು ಕಂಡೀಷನ್ ಹಾಕಿದ್ದೆ -ರಮೇಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ – ಲಕ್ಷ್ಮಿ ಹೆಬ್ಬಾಳಕರ್ ಗೆ ಯಾವುದೇ ಸ್ಥಾನ ಮಾನ ಕೊಡಬಾರದೆಂದು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಎಲ್ಲರೂ ಇದ್ದಾಗಲೇ ನಿರ್ಧಾರ ಆಗಿತ್ತು. ಆದರೂ ಆಕೆಗೆ ನಿಗಮ ಮಂಡಳಿ ಸ್ಥಾನ ನೀಡಿದರು. ನಾನು ಸುಮ್ಮನೇ ಕುಳಿತಿದ್ದರೆ  ಅವರನ್ನು ಮಂತ್ರಿ ಮಾಡ್ತಿದ್ರು ಎಂದು ಬಿಜೆಪಿ ಸೇರಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಪಕ್ಷಾಂತರದ ಗುಟ್ಟನ್ನು ಬಹಿರಂಗ ಪಡಿಸಿದ್ದಾರೆ.

ಗೋಕಾಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮಿ ಹೆಬ್ಬಾಳಕರ್  ಅವರಿಗೆ ಯಾವುದೇ ಸ್ಥಾನ ಕೊಡಬಾರದೆಂದು ನಾನು ಹೇಳಿದ್ದೆ. ಆದರೆ ನಿಗಮ ಮಂಡಳಿ ಕೊಟ್ಟರು. ನಾವು ಸೀನಿಯರ್. ಲಕ್ಷ್ಮಿ ಹೆಬ್ಬಾಳಕರ್ ಜೂನಿಯರ್. ಅವರನ್ನು ನಮ್ ತಲೆ ಮೇಲೆ ಕೂಡ್ರಿಸಿದ್ರೆ ಹೇಗೆ? ಸೀನಿಯರ್ ಇದ್ರೆ ಅವರನ್ನು ಬೇಕಾದರೆ ಸಿಎಂ ಮಾಡಿಕೊಳ್ಳಲಿ. ನಮ್ಮದೇನೂ ಅಭ್ಯಂತರವಿಲ್ಲ ಎಂದೂ ಹೇಳಿದರು.

ಡಿ.ಕೆ.ಶಿವಕುಮಾರ್ ಗೂ ಬೆಳಗಾವಿ ರಾಜಕಾರಣಕ್ಕೂ ಏನು ಸಂಬಂಧ? ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಎಲ್ರೂ ಇದ್ದಾಗಲೇ ಲಕ್ಷ್ಮಿ ಹೆಬ್ಬಾಳಕರ್ ಗೆ ಏನೂ ಕೊಡುವುದಿಲ್ಲ ಎಂದು ನಿರ್ಧಾರ ಆಗಿತ್ತು. ನಾವು ಸುಮ್ಮನೆ ಕುಳಿತರೆ ಮಂತ್ರಿ ಮಾಡ್ತದ್ರು. ಡಿ.ಕೆ.ಸಿವಕುಮಾರ ಅವರದ್ದಷ್ಟೆ ಅಲ್ಲ. ನಮ್ಮದೂ ತಪ್ಪಿದೆ. ಆಕಿಗೆ ಟಿಕೆಟ್ ಕೊಡಲು ನಾವೂ ಸಪೋರ್ಟ್ ಮಾಡಿದೆವು. ನಮ್ಮದೂ ತಪ್ಪಿದೆ ಎಂದೂ ಅಲವತ್ತುಕೊಂಡರು.

ಆಕೆಯ ನಶೀಬ್ ದಲ್ಲಿದ್ದರೆ ಮಂತ್ರಿ ಆಗಲಿ. ಆದರೆ ಆಕಿಗೆ ನನ್ನದೇ ರಾಜ್ಯ ಎನ್ನುವ  ದುರುದ್ದೇಶ ಬಂತು ಎಂದು ಹರಿಹಾಯ್ದರು.

ನನ್ನ-ಸತೀಶ್ ಜಗಳ ಶಾಲಾಮಟ್ಟದಿಂದ ಇದೆ. ಸಾಯೋವರೆಗೂ ಇರುವುದೇ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಮಾಧ್ಯಮದವರಿಗೇ ಹೇಳಿದರು.

ಸಮ್ಮಿಶ್ರ ಸರಕಾರ ಬೀಳಿಸುವ ನಿರ್ಧಾರವಾಗಿದ್ದೆಲ್ಲಿ? ರಹಸ್ಯ ಬಿಚ್ಚಿಟ್ಟ ರಮೇಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button