Kannada NewsKarnataka NewsLatest

ಬೆಳಗಾವಿಗೆ ಡಬಲ್ ಧಮಾಕಾ: ಕ್ರೆಡೈಯಿಂದ 2 ಅವಾರ್ಡ್ಸ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕರ್ನಾಟಕ ಕ್ರೆಡೈನಿಂದ ಈ ಬಾರಿ ಬೆಳಗಾವಿಗೆ 2 ಪ್ರಶಸ್ತಿ ಬಂದಿದೆ.

ಕ್ರೆಡೈ ಬೆಳಗಾವಿಯ ನಿಕಟಪೂರ್ವ ಅಧ್ಯಕ್ಷ ಕೈಸ್ ನೂರಾನಿ ಮತ್ತು ಕ್ರೆಡೈ ರಾಜ್ಯ ನಿಯೋಜಿತ ಅಧ್ಯಕ್ಷ ಚೈತನ್ಯ ಕುಲಕರ್ಣಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Home add -Advt

ಅತ್ಯುತ್ತಮ ರೆಸಿಡೆನ್ಸಿಯಲ್ ಅಪಾರ್ಟ್ ಮೆಂಟ್ ಗಾಗಿ 50ಕ್ಕಿಂತ ಹೆಚ್ಚು ಫ್ಲ್ಯಾಟ್ ವಿಭಾಗದಲ್ಲಿ ಕೈಸ್ ನೂರಾನಿ ಮತ್ತು ಫೈಜಾನ್ ಸೇಠ್ ಅವರ ಹನುಮಾನ್ ನಗರದ ದಿ ಸೆವನ್ ಅಪಾರ್ಟ್ ಮೆಂಟ್ ಗೆ ಪ್ರಶಸ್ತಿ ಬಂದಿದೆ.

 

ಹಾಗೆಯೇ 50ಕ್ಕಿಂತ ಕಡಿಮೆ ಫ್ಲ್ಯಾಟ್ ವಿಭಾಗದಲ್ಲಿ ಚೈತನ್ಯ ಕುಲಕರ್ಣಿ ಅವರ ಚನ್ನಮ್ಮ ನಗರದ ನಿತ್ಯ ಚೈತನ್ಯ ಅಪಾರ್ಟ್ ಮೆಂಟ್ ಗೆ ಪ್ರಶಸ್ತಿ ಬಂದಿದೆ.

ಬೆಂಗಳೂರಿನಲ್ಲಿ ನಡೆದ ಕ್ರೆಡೈ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Related Articles

Back to top button