Belagavi NewsBelgaum NewsKarnataka News

*ಬೆಳಗಾವಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ತಾಲೂಕಿನ ಚಂದನ ಹೊಸೂರ ಗ್ರಾಮದಲ್ಲಿ ಏ. 30 ಮತ್ತು ಮೇ 01 ರಂದು ಎರಡು ದಿನಗಳ ಕಾಲ ಪಾವನಕ್ಷೇತ್ರ ಬಡೇಕೊಳ್ಳಮಠದ ಶ್ರೀ ನಾಗಯ್ಯ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಬಸವ ಜಯಂತಿ ನಿಮಿತ್ಯ ಕೊಳ್ಳಬಸವ ನಾಗಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹಗಳು ಜರುಗಲಿವೆ.

ಬುಧವಾರ ದಿ. 30 ರಂದು ಮುಂಜಾನೆ 7 ಗಂಟೆಗೆ ಮಹೇಶ ಕಂಬಳಿಮಠ ಇವರಿಂದ ಕೊಳ್ಳಬಸವ ನಾಗಲಿಂಗೇಶ್ವರನಿಗೆ ಮಹಾರುದ್ರಾಭೀಷೇಕ ರಾತ್ರಿ 9 ಗಂಟೆಯಿಂದ ಭಜನಾ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

Home add -Advt

ಗುರುವಾರ ದಿ. 01 ಶ್ರೀ ಸಿದ್ದಲಿಂಗ ದೇವರು ಹಿರೇಮಠ ಇವರ ಸಾನಿಧ್ಯದಲ್ಲಿ ಮಧ್ಯಾಹ್ನ 12 ಗಂಟೆಗೆ ಸಾಮೂಹಿಕ ವಿವಾಹಗಳು ಜರುಗವವು. 

ಸಾಮೂಹಿಕ ವಿವಾಹ ಮಾಡಿಕೊಳ್ಳುವವರು ಹೆಚ್ಚಿನ ಮಾಹಿತಿಗಾಗಿ ಮೊ.ನಂ. 7483645814, 953818187326, 9620423149, 9916453667 ಇವರನ್ನು ಸಂಪರ್ಕಿಸಲು ಶ್ರೀ ಕೊಳ್ಳಬಸವ ನಾಗಲಿಂಗೇಶ್ವರ ದೇವಸ್ಥಾನ ಅಭಿವೃದ್ದಿ ಹಾಗೂ ಸಮಾಜ ಸೇವಾ ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button