Belagavi NewsBelgaum NewsKannada NewsKarnataka NewsNationalPolitics

*”ಶಿವ- ಬಸವ ಜಯಂತಿ ಉತ್ಸವದ ಪ್ರಯುಕ್ತ  ರಕ್ತದಾನ ಶಿಬಿರ”*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಿವ ಬಸವ ಜಯಂತಿ ಉತ್ಸವದ ಪ್ರಯುಕ್ತವಾಗಿ ಹಿಂಡಾಲ್ಕೋ ಕಂಪನಿಯಲ್ಲಿ KLE ಆಸ್ಪತ್ರೆ ಬೆಳಗಾವಿ ಇವರ ಸಹಯೋಗದಲ್ಲಿ  ಬಸವನ ಬಳಗವು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿತ್ತು.

ಶಿಬಿರದಲ್ಲಿ 150ಕ್ಕೂ ಹೆಚ್ಚು ದಾನಿಗಳು ರಕ್ತವನ್ನು ದಾನ ಮಾಡಿದರು. ಶಿಬಿರದ ಉದ್ಘಾಟನೆಯನ್ನು ಕಂಪನಿಯ ಮುಖ್ಯಸ್ಥರಾದ ಅಭಿಜಿತ್ ಬಂಡಿಯವರು ಉದ್ಘಾಟಿಸಿ ರಕ್ತದಾನ ಅರಿವು ಮೂಡಿಸುವುದರೊಂದಿಗೆ ಇನ್ನೂ ಹೆಚ್ಚು ರಕ್ತದಾನವನ್ನು ಮಾಡಬೇಕಾದಂತ ಅವಶ್ಯಕತೆ ಇದೆ ಎಂದು ಹೇಳಿದರು. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ  ಎಸ್ ವ್ಹಿ ವೀರಗಿ ರಕ್ತ ಭಂಡಾರ ಮುಖ್ಯಸ್ತರು  ಮಹೇಶ್ ಶೆಟ್ಟಿ, ಕಂಪನಿಯ ವೈದ್ಯಾಧಿಕಾರಿಗಳಾದ ಜೋಷ್ಣಾ ಎಂ, ಬಸವನ ಬಳಗದ ಕಾರ್ಯದರ್ಶಿಗಳಾದ  ಬಿ ಎಂ ಕುಲಕರ್ಣಿ, KLE ವೈದ್ಯಾಧಿಕಾರಿಗಳಾದ ಡಾ. ಮಾನೆ ಉಪಸ್ಥಿತರಿದ್ದರು. ಅಶೋಕ್ ಈಟ್ಟಿ  ಅವರು ಸ್ವಾಗತಿಸಿದರು. ಬಸವರಾಜ್ ತಳವಾರ ಮತ್ತು ವಂದಿಸಿದರು.

Home add -Advt

Related Articles

Back to top button