*ಇಸ್ಕಾನ್‌ನ ಹಿಂದೂ ನಾಯಕ ಚಿನ್ಮಯ್ ಕೃಷ್ಣ ದಾಸ್ ಗೆ ಜಾಮೀನು ನೀಡಿದ ಬಾಂಗ್ಲಾದೇಶ ಕೋರ್ಟ್*

ಪ್ರಗತಿವಾಹಿನಿ ಸುದ್ದಿ: ಕಳೆದ ವರ್ಷ ಬಂಧನವಾಗಿದ್ದಿ ಇಸ್ಕಾನ್‌ನ ಹಿಂದೂ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರಿಗೆ ಬಾಂಗ್ಲಾದೇಶ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.
ಅಂತರರಾಷ್ಟ್ರೀಯ ಸಮುದಾಯವು ನ್ಯಾಯಾಂಗ ಕಿರುಕುಳ ಎಂದು ಪರಿಗಣಿಸುವ ದೇಶದ್ರೋಹದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಕೃಷ್ಣ ದಾಸ್ ಅವರನ್ನು 2024 ರ ನವೆಂಬರ್ 25 ರಂದು ಬಾಂಗ್ಲಾದೇಶದಲ್ಲಿ ಬಂಧಿಸಲಾಗಿತ್ತು.
ನಂತರ ಇಬ್ಬರು ನ್ಯಾಯಾಧೀಶರ ಪೀಠವು ಬುಧವಾರ ಅವರಿಗೆ ಜಾಮೀನು ನೀಡಿತು. ಸುಪ್ರೀಂ ಕೋರ್ಟ್ ಮೇಲ್ಮನವಿ ವಿಭಾಗವು ಹೈಕೋರ್ಟ್ ತೀರ್ಪನ್ನು ತಡೆಹಿಡಿಯದಿದ್ದರೆ, ಹೈಕೋರ್ಟ್ ಆದೇಶದ ನಂತರ ಅವರು ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಚಿನ್ಮಯ್ ಅವರ ವಕೀಲ ಪ್ರಹ್ಲಾದ್ ದೇಬ್ ನಾಥ್ ಎನ್ನಲಾಗಿದೆ.
ಚಿನ್ಮಯ್ ದಾಸ್ ಅವರ ವಕೀಲ ಅಪೂರ್ವ ಕುಮಾರ್ ಭಟ್ಟಾಚಾರ್ಜಿ ಅವರು ಹಿಂದೂ ಸನ್ಯಾಸಿ ಯಾವುದೇ ವಿಚಾರಣೆಯಿಲ್ಲದೆ ಜೈಲಿನಲ್ಲಿದ್ದಾಗ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಆರೋಪಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




