Kannada NewsKarnataka News

*ಗೋಡೆ ಕುಸಿದು ಏಳು ಜನರ ಸಾವು: ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಾಗ ಸಂಭವಿಸಿದ ದುರ್ಘಟನೆ*

ಪ್ರಗತಿವಾಹಿನಿ ಸುದ್ದಿ: ಸಿಂಹಾಚಲಂ ಬೆಟ್ಟದ ತುದಿಯಲ್ಲಿ ಗೋಡೆ ಕುಸಿದು ಮೂವರು ಮಹಿಳಾ ಭಕ್ತರು ಸೇರಿದಂತೆ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಕೆಲವರು ಗಾಯಗೊಂಡಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.

ವಾರ್ಷಿಕ ಚಂದನೋತ್ಸವವಉತ್ಸವದ ಸಂದರ್ಭದಲ್ಲಿ ಶ್ರೀ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿಯ ನಿಜರೂಪ ದರ್ಶನವನ್ನು ವೀಕ್ಷಿಸಲು ಭಕ್ತರು ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.

Home add -Advt

ಬೆಳಗಿನ ಜಾವ 3.30ರಿಂದ 4 ಗಂಟೆಯ ನಡುವೆ ನಗರದಲ್ಲಿ ಭಾರೀ ಮಳೆಯೊಂದಿಗೆ ಭಾರಿ ಬಿರುಗಾಳಿ ಬೀಸಿದ ನಂತರ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಸಿಂಹಗಿರಿ ಬಸ್ ನಿಲ್ದಾಣದ ಬಳಿ ನಿರ್ಮಿಸಲಾಗುತ್ತಿರುವ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ₹300 ಸರತಿ ಸಾಲಿನಲ್ಲಿ ಗೋಡೆ ಕುಸಿದಿದೆ.

ಜಿಲ್ಲಾಧಿಕಾರಿ ಎಂ.ಎನ್. ಹರೇಂಧಿರ ಪ್ರಸಾದ್, ವಿಶಾಖಪಟ್ಟಣಂ ಸಂಸದ ಎಂ. ಶ್ರೀಭರತ್, ಪೊಲೀಸ್‌ ಆಯುಕ್ತ ಶಂಕರಬ್ರತ ಬಾಗ್ನಿ ಸ್ಥಳಕ್ಕೆ ಧಾವಿಸಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

Related Articles

Back to top button