ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿದ್ಯಾರ್ಥಿಗಳು ಸುಂದರ ಬದುಕು ಕಟ್ಟಿಕೊಳ್ಳವುದರ ಜತೆಗೆ ಕುಟುಂಬ ಹಾಗೂ ಸಮಾಜ ಸೇವೆಯಲ್ಲಿ ತೊಡಗಬೇಕು. ಪ್ರತಿಯೊಬ್ಬರೂ ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಮಾತ್ರ ಸಮಾಜ ಪರಿವರ್ತನೆಯಾಗಲು ಸಾಧ್ಯ ಎಂದು ರಾಜ್ಯೋತ್ಸವ ಪ್ರಶಸ್ತಿ ವೀಜೆತರಾದ ಶಿವಾಜಿ ಕಾಗಣೀಕರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಹಿಂದವಾಡಿ ಸಭಾಭವನಲ್ಲಿ ರವಿವಾರಲೇಡಿಸ್ ವಿಂಗ್ ಹಿಂದ್ ಕೊ-ಆಪರೆಟಿವ್ ಹೌಸಿಂಗ್ ಸೊಸಾಯಿಟಿ, ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ವತಿಯಿಂದ ಮಕ್ಕಳ ದಿನಾಚರಣೆ ನಿಮಿತ್ತವಾಗಿ ಆಯೋಜಿಸಲಾಗಿದ್ದ, ವಿದ್ಯಾರ್ಥಿಗಳ ಹಾಗು ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಗೌರವ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿರು.
ಸಮಾಜ ಏಳಿಗೆಗಾಗಿ ಶ್ರಮಿಸಿದ್ದರಿಂದ ರಾಜ್ಯೋತ್ಸವ ಪ್ರಶಸ್ತಿ ಒಲಿದ ಬಂದಿದೆ. ಮಹಿಳೆಯರು ಕಟ್ಟಿದ ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ಸಮಾಜಮುಖಿಯಾಗಿ ಬೆಳೆದು ಹೆಮ್ಮರವಾಗಿವೆ. ವಿಜೇತರನ್ನು ಗುರುತಿಸಿ ಗೌರವ ಸನ್ಮಾನಿಸುವ ಕಾರ‍್ಯ ಶ್ಲಾಘನೀಯ ಎಂದರು.
ಮಲ್ಯೇಶಿಯಾದಲ್ಲಿ ನಡೆದ ಅಂತರ್‌ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಸುವರ್ಣ ಪದಕ ವಿಜೇತೆ ಕುಮಾರಿ ನಕ್ಷತ್ರಾ ಶೆಟ್ಟಿ, ಕಂಚಿನ ಪದಕ ವಿಜೇತೆ ಕುಮಾರಿ ನಿಶಾಲ ಅರ್ಕಸಾಲಿ, ಮೈಸೂರು ದಸರಾ ನಿಮಿತ್ಯ ಆಯೋಜಿಸಲಾದ ಈಜು ಸ್ಪರ್ಧೆಯಲ್ಲಿ ಕಂಚಿನ ಪದಕ ವಿಜೇತ ಕುಮಾರ ದ್ರವ್ಯಾ ಪಟೇಲ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ಥಿ ವಿಜೇತರಾದ ಶಿವಾಜಿ ಕಾಗಣೀಕರ್ ಅವರನ್ನು ಸನ್ಮಾನಿಸಲಾಯಿತು.
ಮಂಡಳಿಯ ಅಧ್ಯಕ್ಷೆ ಶೋಭಾ ಕಾಡನ್ನವರ ಮಾತನಾಡಿ, ಬೆಳಗಾವಿ ವಿದ್ಯಾರ್ಥಿಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿರುವುದು ಭಾರತಕ್ಕೆ ಸಂದ ಗೌರವವಾಗಿದೆ. ಈ ಮಕ್ಕಳನ್ನು ಗೌರವಿಸುವುದರಿಂದ ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ಗೌರವ ಹೆಚ್ಚಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಸುಧೀರ ಕುಲಕರ್ಣಿ, ಮಂಗಲಾ ಮಠದ, ಪ್ರಿಯಾಂಕಾ ಪತ್ತಾರ ಪ್ರಾರ್ಥನಾಗೀತೆ ಹಾಡಿದರು. ಆಶಾ ನಿಲಜಗಿ ಸ್ವಾಗತಿಸಿದರು. ದರ್ಶನಾ ನಿಲಜಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಜಂಪಿ ಅಥಿತಿ ಪರಿಚಯಿಸಿದರು. ಅಕ್ಷತಾ ಪಾಟೀಲ, ದೀಪ್ತಿ ಕಾಗವಾಡ ನಿರೂಪಿಸಿದರು. ಶೈಲಾ ದೇಶಪಾಡೆ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ