Kannada NewsKarnataka News

ಅಥಣಿ: ಪಕ್ಷೇತರರ ಮನವೊಲಿಸುವ ಕಾಂಗ್ರೆಸ್ ಯತ್ನ ವಿಫಲ

ಪ್ರಗತಿವಾಹಿನಿ ಸುದ್ದಿ, ಅಥಣಿಪಕ್ಷೇತರರಾಗಿ ಕಣದಲ್ಲಿರುವ ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಪಕ್ಷದ ಮುಖಂಡರು ನಡೆಸಿದ ಯತ್ನ ಫಲ ನೀಡಲಿಲ್ಲ.

ಎಂ.ಬಿ.ಪಾಟೀಲ ಮತ್ತು ಈಶ್ವರ ಖಂಡ್ರೆ ಪಕ್ಷೇತರರಾಗಿ ಸ್ಪರ್ಧಿಸಿರುವವರ ಜೊತೆ ಚರ್ಚಿಸಿದರು. ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು. ಆದರೆ ಪಕ್ಷೇತರರು ತಮ್ಮೊಳಗೆ ಒಗ್ಗಟ್ಟು ಪ್ರದರ್ಶಿಸಿದ್ದು, ಯಾರಾದರೊಬ್ಬರು ಕಣದಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.

ಒಬ್ಬರೆ ಚುನಾವಣೆ ಎದುರಿಸಿ ಉಳಿದವರು ಅವರಿಗೆ ಬೆಂಬಲ ಘೋಷಿಸುವಂತೆ ಮಂಗಳವಾರ ಮಧ್ಯಾಹ್ನ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಎಸ್.ಕೆ.ಬುಟಾಳಿ ಮನೆಯಲ್ಲಿ ಸಭೆ ನಡೆಸಿದರು.
ಎಸ್ ಕೆ ಬುಟಾಳಿ, ಮಾಜಿ ಶಾಸಕ ಶಹಜಹಾನ ಡೊಂಗರಗಾವ, ಮುಖಂಡ ಸುರೇಶಗೌಡಾ ಪಾಟೀಲ ಸೇರಿ ಸಭೆ ನಡೆಸಿದರು.

ನಂತರ ಮಾತನಾಡಿದ ಪಕ್ಷೇತರ ಅಭ್ಯರ್ಥಿ ಎಸ್ ಕೆ ಬುಟಾಳಿ ನಾನು ಕಾಂಗ್ರೇಸ್ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದೇನೆ. ಆದರೆ ಕಾಂಗ್ರೇಸ್ ಪಕ್ಷದಿಂದ ನನಗೆ ಯಾವಾಗಲೂ ಅವಮಾನವಾಗಿದೆ, ಇನ್ನು ಮುಂದೆ ನಾನು ಯಾವತ್ತೂ ಕಾಂಗ್ರೇಸ್ ಪಕ್ಷಕ್ಕೆ ಹೋಗುವುದಿಲ್ಲ, ಸೋಮವಾರ ಮಧ್ಯಾಹ್ನ ನನ್ನ ಮನೆಗೆ ಅಥಣಿ ಉಪಚುನಾವಣೆಯ ಉಸ್ತುವಾರಿಯಾಗಿರುವ ಎಂ.ಬಿ.ಪಾಟೀಲ ಅವರು ಬಂದಿದ್ದರು. ಈ ಚುನಾವಣೆ ಬಿಟ್ಟು ಮತ್ತೆ ಮುಂದಿನ ೩ ತಿಂಗಳ ನಂತರ ಮತ್ತೆ ಚುನಾವಣೆ ಬರುತ್ತವೆ. ಆವಾಗ ನಿಮಗೆ ಟಿಕೇಟ್ ನೀಡುವುದಾಗಿ ಹೇಳಿದರು ಎಂದರು.

ನಾವು ನಾಮಪತ್ರವನ್ನ ಹಿಂಪಡೆಯುವುದಿಲ್ಲಾ ಏನೇ ಇದ್ದರೂ ಇನ್ನು ಚುನಾವಣೆ ಎದುರಿಸುವ ಮಾತೊಂದೆ ಅಂತಿಮ. ನಾವು ಎಲ್ಲರೂ ಒಟ್ಟಾಗಿ ಸೇರಿದ್ದೇವೆ. ಮುಂದೆ ಯಾರಾದರೂ ಒಬ್ಬರು ಕಣದಲ್ಲಿ ಇದ್ದು ಉಳಿದವರು ಅವರಿಗೆ ಬೆಂಬಲ ಘೋಷಿಸುವ ಮಾತಾಗಿದೆ ಎಂದರು.
ಈ ವೇಳೆ ನೂರಾರು ಕಾರ್ಯಕರ್ತರು ಸೇರಿದ್ದರು ಅವರೊಂದಿಗೆ ಮತ್ತಿಬ್ಬರು ಪಕ್ಷೇತರ ಅಭ್ಯರ್ಥಿಗಳಾದ ಶಹಜಹಾನ ಡೊಂಗರಗಾವ ಹಾಗೂ ಸುರೇಶಗೌಡಾ ಪಾಟೀಲ ಅವರು ಉಪಸ್ಥಿತರಿದ್ದರು.

ಮನವಲಿಕೆ ಯತ್ನ ವಿಫಲ- ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಎಂ.ಬಿ.ಪಾಟೀಲ ಇಬ್ಬರು ಸೇರಿ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ ಮುಖಂಡರಾದ ಶಹಜಹಾನ ಡೊಂಗರಗಾವ ಹಾಗೂ ಎಸ್.ಕೆ.ಬುಟಾಳಿ ಅವರ ಮನವೊಲಿಸುವ ಪ್ರಯತ್ನ ನಡೆಸಿದರು. ನಾವು ಯಾರ ಮಾತನ್ನೂ ಕೇಳಲು ಸಿದ್ದರಿಲ್ಲವೆಂದು ಖಡಾಖಂಡಿತವಾಗಿ ಹೇಳಿ ಕಳುಹಿಸಿರುವುದಾಗಿ ಇಬ್ಬರು ನಾಯಕರು ಹೇಳಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button