Kannada NewsKarnataka News

ನಾಟಕಗಳಿಗೆ ಜೀವ ತುಂಬುವ ಕಾರ‍್ಯವಾಗಲಿ: ಒಶೋ ಜ್ಯೊ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಲೆ, ಸಾಹಿತ್ಯ, ನಾಟಕಗಳಿಂದ ಲಕ್ಷಾಂತರ ಕಲಾವಿದರು ಬದುಕು ರೂಪಿಸಿಕೊಂಡಿದ್ದಾರೆ. ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವ ಕರ್ತವ್ಯ ನಮ್ಮದಾಗಿದೆ. ರಂಗ ಕಲೆಯ ಪಾದಾರ್ಪಣೆ ಮೂಲಕ ಸಾಕಷ್ಟು ಕಲಾವಿದರು ಚಿತ್ರಗಳಲ್ಲಿ ಮಿಂಚಿದ್ದಾರೆ ಎಂದು ಗೋವಾದ ಥಿಯೇಟರ್ ಬಿಲಾಂಗಿಂಗ್ ತಂಡದ ನಿರ್ಮಾಪಕಿ ಒಶೋ ಜ್ಯೊ ಹೇಳಿದರು.


ಇಲ್ಲಿನ ಸದಾಶಿವನಗರದ ಚಿಂದೊಡಿ ಲೀಲಾ ರಂಗಮಂದಿರಲ್ಲಿ ಮಂಗಳವಾರ ೧೯ ರಂದು ಯುನೈಟೆಡ್ ಸೋಶಿಯಲ್ ವೆಲ್ ಫೇರ್ ಅಸೋಸಿಯೇಶನ್, ರೋಟರಿ ಕ್ಲಬ್ ಮಿಡ್ ಟೌನ್, ಕೆ.ಎಲ್.ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ, ಕೀರ್ತಿ ಸರ್ಜಿಕಲ್, ಹಾಗೂ ವಿನುತಾ ಶ್ರೇಯ ಪ್ರಕಾಶನ ವತಿಯಿಂದ ಆಯೋಜಿಸಲಾಗಿದ್ದ, ಎರಡು ದಿನ ಜರುಗಲಿರುವ ಭವ್ಯ ನಾಟಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಂತ್ರಜ್ಞಾನದಲ್ಲಿ ಸಿಲುಕಿ ನಾಟಕ, ಕಲೆಗಳು ನಶಿಸುತ್ತಿವೆ. ಇವುಗಳಿಗೆ ಜೀವ ತುಂಬುವ ಕಾರ‍್ಯವಾಗಬೇಕಿದೆ. ಹಿರಿಯ ಕಲಾವಿದರ ಶ್ರಮದಿಂದ ರಂಗ ಕಲೆ, ನಾಟಕ ಜೀವಂತಕ್ಕೆ ಸಾಕ್ಷಿ ಎಂದರು.
ಡಾ.ಡಿ.ಎಸ್. ಚೌಗಲೆ  ಸ್ವಾಗತಿಸಿದರು.  ಬಾಸೂರು ತಿಪ್ಪೇಸ್ವಾಮಿ,ಅಶೋಕ ಮಳಗಲಿ ಮತ್ತು ಕೀರ್ತಿ ಸುರಂಜನ್, ಹಾಗೂ ಇತರರು ಇದ್ದರು. ಗಿರೀಶ ಕಾರ್ಮಾಡರ ತಂಡದಿಂದ ರಾಕ್ಷಸ- ತಂಗಡಿ ನಾಟಕ ಪ್ರಯೋಗವಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button