LatestNationalWorld

*ಪಾಕ್ ಪರಮಾಣು ಕೇಂದ್ರ ಬ್ಲಾಸ್ಟ್?*

ಪ್ರಗತಿವಾಹಿನಿ ಸುದ್ದಿ, ನವದೆಹಲಿ:
ಕಳೆದ ಐದು ದಿನಗಳಿಂದ ಪಾಕ್ ವಿರುದ್ಧ ಭಾರತ ಕೈಗೊಂಡಿರುವ ಆಪರೇಶನ್ ಸಿಂಧೂರನಲ್ಲಿ ಪಾಕ್ ನ ಪರಮಾಣು ಕೇಂದ್ರ ನಾಶವಾಗಿದೆಯೇ ?

ಹೀಗೊಂದು ಮಾಹಿತಿ ಮೂಲಗಳಿಂದ ಹೊರಬೀಳುತ್ತಿದೆ.

Home add -Advt


ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕ್ ಉಗ್ರರು ನರಮೇದ ನಡೆಸಿದ್ದರು. ಇದಕ್ಕೆ ಪ್ರತಿಕಾರವಾಗಿ ಭಾರತ ಆಪರೇಶನ್ ಸಿಂದೂರ ಕಾರ್ಯಾಚರಣೆ ಕೈಗೊಂಡಿತು.

ಭಾರತದ ನೌಕಾ ಸೇನೆ ಪಾಕಿಸ್ತಾನದ ಕರಾಚಿ ಬಂದರನ್ನೇ ಉಡಾಯಿಸಿದ್ದರೆ ವಾಯು ಸೇನೆ ಪಾಕಿಸ್ತಾನದ 9 ಕ್ಕೂ ಹೆಚ್ಚು ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆ. ಅನೇಕ ಪ್ರಮುಖ ಏರ್ ಬೇಸ್ ಗಳನ್ನು ನಾಶಪಡಿಸಿದೆ.
ಈ ನಡುವೆ ಪಾಕಿಸ್ತಾನದ ಪರಮಾಣು ಕೇಂದ್ರದ ಮೇಲೆಯೇ ಭಾರತ ಕ್ಷಿಪಣಿ ದಾಳಿ ನಡೆಸಿರುವ ಮಾತು ಕೇಳಿಬರುತ್ತಿದೆ. ರಾವಲ್ಪಿಂಡಿ ಬಳಿ ಭಾರತ ನಡೆಸಿದ ಕ್ಷಿಪಣಿ ದಾಳಿ ವೇಳೆ ಪಾಕಿಸ್ತಾನದ ಪರಮಾಣು ಕೇಂದ್ರ ನಾಶವಾಗಿರುವ ಬಲವಾದ ಅನುಮಾನ ವ್ಯಕ್ತವಾಗಿದೆ.


ರಷ್ಯಾ ಮತ್ತು ಅಮೇರಿಕದ ವಿಜ್ಞಾನಿಗಳು ಸ್ಥಳಕ್ಕೆ ಧಾವಿಸಿ ವಿಕಿರಣ ಸೋರಿಕೆಯ ಅಪಾಯದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.


ಪಾಕ್ ಶರಣಾಗತಿಗೆ ಇದುವೇ ಕಾರಣ ?
ಕೆಲವು ಮೂಲಗಳ ಪ್ರಕಾರ ಭಾರತ ಉದ್ದೇಶಪೂರ್ವಕವಾಗಿ ಪಾಕ್ ಪರಮಾಣು ಕೇಂದ್ರದ ಅತೀ ಸಮೀಪಕ್ಕೆ ಕ್ಷಿಪಣಿ ದಾಳಿ ನಡೆಸಿದೆ. ಆ ಮೂಲಕ ಪಾಕಿಸ್ತಾನದ ಪರಮಾಣು ಶಕ್ತಿಯನ್ನು ಉಡಾಯಿಸುವ ಎಚ್ಚರಿಕೆ ನೀಡಿದೆ.

ಇದರಿಂದ ಬೆಚ್ಚಿ ಬಿದ್ದಿರುವ ಪಾಕ್ ತಕ್ಷಣ ಯುದ್ಧ ನಿಲ್ಲಿಸಲು ಭಾರತದ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಶನ್ಸ್ ಗೆ ಕರೆ ಮಾಡಿ ಶರಣಾಗತಿ ಕೋರಿತು ಎನ್ನಲಾಗಿದೆ.

ಈ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆದರೆ ಎರಡೂ ದೇಶದ ಸರಕಾರಗಳು ಇನ್ನೂ ಖಚಿತಪಡಿಸಿಲ್ಲ.

Related Articles

Back to top button