Belagavi NewsBelgaum NewsKarnataka News

*ಮೀನು ಹಿಡಿಯಲು ಹೋಗಿದ್ದ ಬಾಲಕ ಶವವಾಗಿ ಪತ್ತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :ಮೀನು ಹಿಡಿಯಲು ಹೋಗಿದ್ದ ಬಾಲಕ ನದಿಯಲ್ಲಿ ಮುಳುಗಿ  ಸಾವಿಗಿಡಾದ ಘಟನೆ ಗೋಕಾಕ ತಾಲೂಕಿನ  ಕೊಣ್ಣೂರಲ್ಲಿ‌ ನಡೆದಿದೆ.

ಮನೋಜ ಲಕ್ಷ್ಮಣ ನಾಯಕ (15) ಸಾವಿಗಿಡಾದ ಬಾಲಕ ಎಂದು ತಿಳಿದು ಬಂದಿದೆ. ಕೊಣ್ಣೂರ ದೂಪಧಾಳ ಸೇತುವೆ ಕೆಳಗಿರುವ ಘಟಪ್ರಭಾ ನದಿಯಲ್ಲಿ ಹೆಚ್ಚಾಗಿ ನೀರು  ಹರಿಯುತ್ತಿದ್ದಾಗ ಈಜಲು ಹೋಗಿದ್ದಾಗ ಮನೋಜ ಲಕ್ಷ್ಮಣ ನಾಯಕ ಈಜು ಬರದ ಕಾರಣ ರಬಸದಿಂದ ಹರಿಯುತ್ತಿರುವ ನೀರಿನಲ್ಲಿ ಮುಳುಗಿ ಹೋಗಿದ್ದ. ಅಗ್ನಿ ಶ್ಯಾಮಕ ದಳದ ಅಧಿಕಾರಿ ಮತ್ತು  ಸಿಬ್ಬಂದಿಗಳು ಹುಡುಕಾಟ ನಡೆಸಿದಾಗ ಮುಳುಗಿ ಹೋಗಿದ್ದ ಬಾಲಕ ಶವವಾಗಿ ಸಿಕ್ಕಿದ್ದಾನೆ.

ಇನ್ನು ಮೃತ ಬಾಲಕ ಕೊಣ್ಣೂರಿನ ರೇಲ್ವೆ ಸ್ಟೇಷನ್ (ಗೋಕಾಕ ರೋಡದ) ನಿವಾಸಿ ಎಂದು ತಿಳಿದು ಬಂದಿದ್ದು, ಮಗನ ಸಾವಿನಿಂದ ಕುಟುಂಬಸ್ಥರ, ಗೆಳೆಯರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ಐ, ಸಿಬ್ಬಂದಿಗಳು ಆಗಮಿಸಿ ಪರಿಶೀಲಿಸಿ ಪ್ರಕಾರಣ ದಾಖಲಿಸಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button