Kannada NewsKarnataka News

ಹುಕ್ಕೇರಿಯಲ್ಲಿ ಕಾಳಭೈರವೇಶ್ವರ ಜಯಂತಿ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ -ಸ್ಥಳಿಯ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಕ್ಷೇತ್ರಪಾಲಕ ಕಾಳಭೈರವ ಸ್ವಾಮಿಯ ಜಯಂತಿ ಮಹೋತ್ಸವ ಶ್ರೀ ಮಠದಲ್ಲಿ ಜರುಗಿತು.
  ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಕಾಳಭೈರವನಿಗೆ ರುದ್ರಾಭಿಷೇಕ, ನೂರೆಂಟು ಎಳ್ಳೆಣ್ಣೆಯ ದೀಪ ಬೆಳಗುವುದರ ಮೂಲಕ ಕಾಲಭೈರವ ಸ್ವಾಮಿ ಜಯಂತಿ ಆಚರಿಸಲಾಯಿತು.
 ಅನೇಕ ಭಕ್ತರು ಆಗಮಿಸಿ ಕಾಳಭೈರವೇಶ್ವರನ ಆಶಿರ್ವಾದ ಪಡೆದರು. ಈ ಸಂದರ್ಭದಲ್ಲಿ ಭಾಗಿಯಾಗಿ ಮಾತನಾಡಿದ ಕರ್ನಾಟಕ ರಾಜ್ಯ ಪುರೋಹಿತ ಸಂಘದ ರಾಜ್ಯಾಧ್ಯಕ್ಷ ವಿದ್ವಾನ್ ಚಂದ್ರಶೇಖರ ಶಾಸ್ತ್ರಿಗಳು ಹುಕ್ಕೇರಿ ಹಿರೇಮಠದ ಕಾಲಭೈರವೇಶ್ವರರಿಗೆ ಇಡೀ ದೇಶದಲ್ಲಿ ಸಹಸ್ರಾರು ಭಕ್ತರಿದ್ದಾರೆ. ಪ್ರತಿ ತಿಂಗಳು ಹುಣ್ಣಿಮೆ ನಂತರ ಬರುವ ಅಷ್ಟಮಿಗೆ ಕಾಳಭೈರವೇಶ್ವರ ದರ್ಶನ ಪಡೆಯುತ್ತಾರೆ ಎಂದರು.
ಹುಕ್ಕೇರಿ ಹಿರೇಮಠ ಗುರುಕುಲದ ವಿದ್ವಾನ ಸಂಪತ್ತಕುಮಾರ ಮಾತನಾಡಿ, ಕಾಳಭೈರವೇಶ್ವರ ಸ್ವಾಮಿಯ ಕೃಪೆ ಎಲ್ಲರ  ಮೇಲಿರಲಿ ಎಂದರು.
ಹೊಳೆಮ್ಮದೇವಿ ದೇವಸ್ಥಾನದ ಧರ್ಮದರ್ಶಿ ಎಚ್ ಎಲ್ ಪೂಜಾರಿ ಮಾತನಾಡಿ, ಹುಕ್ಕೇರಿಯ ಹಿರೇಮಠ ದೇಶ ವಿದೇಶದಲ್ಲಿ ಖ್ಯಾತಿಯಾಗಿದೆ. ಈ ಮಠದ ಎಲ್ಲಾ ಕಾರ್ಯಗಳಲ್ಲಿ ಸರ್ವಧರ್ಮಿಯರು ಆಶಿರ್ವಾದ ಪಡೆಯುತ್ತಿರುವುದು ಸಂತಸದ ಸಂಗತಿ. ಇವತ್ತು ಕಾಲಭೈರವನ ಜಯಂತಿಯನ್ನು ಆಚರಿಸುವ ಮುಖಾಂತರ ನಮ್ಮ ಭಾಗದ ಜನತೆಗೆ  ವಿಶೇಷವಾದ ಆಶಿರ್ವಾದ ಗುರುಗಳು ನೀಡಿದ್ದಾರೆ ಎಂದರು.
ಕಾಳಭೈರವೆಶ್ವರರ ವಾಹನ ಶ್ವಾನಕ್ಕೆ ಸ್ವಾಮಿಗಳು ಆಹಾರವನ್ನು ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button