World

*ಭಾರತಕ್ಕೆ ಮತ್ತೊಂದು ಜಯ: ಬಿಎಸ್ ಎಫ್ ಯೋಧನನ್ನು ಬಿಟ್ಟು ಕಳುಹಿಸಿದ ಪಾಕಿಸ್ತಾನ*

ಪ್ರಗತಿವಾಹಿನಿ ಸುದ್ದಿ: ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವಾಗಿದೆ. ಪಾಕಿಸ್ತಾನ ವಶಕ್ಕೆ ಪಡೆದಿದ್ದ ಬಿಎಸ್ ಎಫ್ ಯೋಧನನ್ನು ಬಿಡುಗಡೆ ಮಾಡಿದೆ.

ಬಿಎಸ್ ಎಫ್ ಯೋಧ ಪೂರ್ಣಮ್ ಕುಮಾರ್ ಶಾನನ್ನು ಪಾಕಿಸ್ತಾನ ಬಿಟ್ಟು ಕಳುಹಿಸಿದೆ. 20 ದಿನಗಳ ಬಳಿಕ ಪಾಕಿಸ್ತಾನ ಪಿ.ಕ್.ಶಾ ಅವರನ್ನು ಬಿಡುಗಡೆ ಮಾಡಿದೆ. ಯೋಧ ಪಿ.ಕೆ.ಶಾ ವಾಘಾ-ಅಟ್ಟಾರಿ ಗಡಿ ಮೂಲಕವಾಗಿ ಭಾರತಕ್ಕೆ ವಾಪಸ್ ಆಗಿದ್ದಾರೆ.

ಪಂಜಾಬ್ ನ ಫಿರೋಜ್ ಪುರ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಗಡಿ ದಾಟಿದ್ದ ಆರೋಪದಲ್ಲಿ ಪಿ.ಕೆ.ಶಾ ಅವರನ್ನು ಪಾಕಿಸ್ತಾನ ಸೇನೆ ಕೆಲ ದಿನಗಳ ಹಿಂದೆ ವಶಕ್ಕೆ ಪಡೆದಿತ್ತು. ಇದೀಗ ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಣೆ, ಭಾರತದ ಎಚ್ಚರಿಕೆ ಸಂದೇಶ, ಸೇನಾಧಿಕರಿಗಳ ಮಾತುಕತೆ ಬಳಿಕ ಪಾಕಿಸ್ತಾನ ಬಿಎಸ್ ಎಫ್ ಯೋಧನನ್ನು ಬಿಡುಗಡೆ ಮಾಡಿ ಕಳುಹಿಸಿದೆ.

Home add -Advt


Related Articles

Back to top button