Belagavi NewsBelgaum NewsKarnataka NewsSports
*ದೋಹಾ ಡೈಮಂಡ್ ಲೀಗ್ ನಲ್ಲಿ ಬೆಳ್ಳಿ ಗೆದ್ದ ನೀರಜ್ ಚೋಪ್ರಾ*

ಪ್ರಗತಿವಾಹಿನಿ ಸುದ್ದಿ: ಭಾರತೀಯ ಒಲಿಂಪಿಕ್ ಕ್ರೀಡಾಪಟು ನೀರಜ್ ಚೋಪ್ರಾ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ದೋಹಾ ಡೈಮಂಡ್ ಲೀಗ್ ನಲ್ಲಿ 91.23 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಭಾರತದ ನೀರಜ್ ಚೋಪ್ರಾ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮೊದಲ ಸ್ಥಾನ ಪಡೆದ ಜುಲಿಯನ್ ವೆಬರ್ ಮೊದಲ ಅವಕಾಶದಲ್ಲಿ 91.06 ಮೀಟರ್ ದೂರಕ್ಕೆ ಭರ್ಜಿ ಎಸೆದಿದ್ದರು. ಆಗ ನೀರಜ್ ಚೋಪ್ರಾ ಅವರು 88.20 ಮೀಟರ್ ಎಸೆದಿದ್ದರು.
ಎರಡನೇ ಎಸೆತದಲ್ಲಿ ನೀರಜ್ ಚೋಪ್ರಾ ಫೌಲ್ ಮಾಡಿದ್ದೇ ಚಿನ್ನದ ಪದಕಕ್ಕೆ ಮುಳುವಾಗಿದೆ. ಕೆಶೋರ್ನ್ ವಾಲ್ ಕಾಟ್ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.



