
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಅಪಾರ್ಟೆಂಟ್ ಬೇಸ್ಮೇಂಟ್ ನಿಂದ ನೀರು ತೆಗೆಯುವ ವೇಳೆ ಕರೆಂಟ್ ಶಾಕ್ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ.
ಮನೋಹರ್ ಕಾಮತ್ (55) ಹಾಗೂ ದಿನೇಶ್(9) ಎಂಬುವವರು ಸಾವನ್ನಪ್ಪಿರುವ ದುರ್ದೈವಿಗಳು. ಬಿಟಿಎಂ ಲೇಔಟ್ ಎರಡನೇ ಹಂತದ ಎನ್ ಎಸ್ ಪಾಳ್ಯ ಏರಿಯಾದಲ್ಲಿರುವ ಮಧುವನ್ ಅಪಾರ್ಟ್ಮೆಂಟ್ನ ನೆಲಮಾಳಿಗೆಯಲ್ಲಿ ನೀರು ತುಂಬಿಕೊಂಡಿತ್ತು.
ವಾಹನ ನಿಲುಗಡೆ ಮಾಡಲು ನೀರು ಹೊರತೆಗೆಯಬೇಕಾದ ಕಾರಣ, ಅಪಾರ್ಟ್ಮೆಂಟ್ ನಿವಾಸಿಗಳಾದ ದಿನೇಶ್ ಹಾಗೂ ಮನಮೋಹನ್ ನೀರು ಹೊರಹಾಕಲು ಮುಂದಾಗಿದ್ದಾರೆ. ಈ ವೇಳೆ ಇಬ್ಬರಿಗೂ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ ಎನ್ನಾಲಾಗಿದೆ.ನೇಪಾಳ ಮೂಲದ ಮನೋಹರ್ ಕುಟುಂಬ ಮಧುವನ್ ಅಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸವಿದ್ದರು.