Belagavi NewsBelgaum NewsKarnataka News

*ನಾಳೆ ಬೆಳಗಾವಿಯಿಂದ ಈ ಭಾಗಗಳಿಗೆ 130 ಬಸ್ ಗಳ ಸಂಚಾರ ರದ್ದು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ 2 ವರ್ಷಗಳ “ಸಮರ್ಪಣೆ ಸಂಕಲ್ಪ” ಕಾರ್ಯಕ್ರಮ ಜರುಗಲಿದ್ದು, ಬೆಳಗಾವಿ ವಿಭಾಗದ ವತಿಯಿಂದ 130 ವಾಹನಗಳನ್ನು ಹೊಸಪೇಟೆ ವಿಭಾಗಕ್ಕೆ ಪೂರೈಸಬೇಕಾಗಿರುವುದರಿಂದ ಬೆಳಗಾವಿ, ಬೈಲಹೊಂಗಲ ಮತ್ತು ಖಾನಾಪೂರ ವಿಭಾಗದ ಬಸ್ ನಿಲ್ದಾಣಗಳಿಂದ ಕಾರ್ಯಾಚರಣೆಯಾಗುವ ಕೆಲ ಮಾರ್ಗಗಳ ಸಾರಿಗೆಗಳನ್ನು ಅನಿವಾರ್ಯ ಕಾರಣಗಳಿಂದಾಗಿ ಮೇ.20, 2025 ರಂದು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ.

ಬೆಳಗಾವಿಯಿಂದ- ಹುಬ್ಬಳ್ಳಿ, ಧಾರವಾಡ, ವಿಜಯಪುರ, ಯಾದಗೀರಿ, ಹುದಲಿ, ಬೆಂಗಳೂರು, ಚಿಕ್ಕಮಗಳೂರು, ಕಿತ್ತೂರ, ಅಳ್ಳಾವರ, ಧಾಮಣಿ, ಸುಂಡಿ, ನಾಲತ್ತವಾಡ, ಕಲಬುರ್ಗಿ, ಶಿರಸಿ, ಸಂಕೇಶ್ವರ, ಸವದತ್ತಿ ಮತ್ತು ಸಿಬಿಟಿಯಿಂದ (ನಗರ/ಉಪನಗರ)- ಅನಗೋಳ, ವಡಗಾಂವ, ರಣಕುಂಡೆ, ಸುಳೇಭಾವಿ, ಹೊನಗಾ, ಯಳ್ಳೂರ, ದೇಸೂರ, ಶಿಂಧೋಳ್ಳಿ, ಸುಂಡಿ ಹಾಗೂ ಬೈಲಹೊಂಗಲದಿಂದ- ಧಾರವಾಡ, ಯರಗಟ್ಟಿ, ಮುನವಳ್ಳಿ, ನೇಸರಗಿ, ಬೆಳಗಾವಿ, ಇಟಗಿ ರೋಡ, ಕಿತ್ತೂರು, ಗಜಮನಾಳ, ಅಂಕಲಗಿ ಬಸ್ ಸಂಚಾರ ರದ್ದುಪಡಿಸಿದ ಮಾರ್ಗಗಳಾಗಿವೆ.

Home add -Advt

ಸಾರ್ವಜನಿಕ ಪ್ರಯಾಣಿಕರು ಸಾರಿಗೆ ಸಂಸ್ಥೆಯೊಂದಿಗೆ ಸಹಕರಿಸಿ ಲಭ್ಯವಿರುವ ಸಾರಿಗೆ ಸೌಲಭ್ಯವನ್ನು ಪಡೆದು ಪ್ರಯಾಣಿಸುವಂತೆ ವಾಕರಸಾಸಂಸ್ಥೆ, ಬೆಳಗಾವಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button