Belagavi NewsBelgaum NewsKarnataka News

*ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಮಾರನೆ ದಿನ ವಿದ್ಯುತ್‌ ಸ್ಪರ್ಶಿಸಿ ಶಿಕ್ಷಕ ಸಾವು*

ಪ್ರಗತಿವಾಹಿನಿ ಸುದ್ದಿ: ಮನೆಯ ಗೇಟ್ ಗೆ ವಿದ್ಯುತ್ ತಗುಲಿ ಪ್ರೌಢಶಾಲೆ ಶಿಕ್ಷಕ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸತ್ಯ ಪ್ರಮೋದ್ ನಗರದಲ್ಲಿ ನಡೆದಿದೆ.

ಪ್ರವೀಣಕುಮಾರ ಜಿ. ಕಡಪಟ್ಟಿಮಠ (41) ಮೃತ ದುರ್ದೈವಿ. ವಿವಾಹ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ಪ್ರವಾಸ ಮುಗಿಸಿ ವಾಪಸ್ ಮನೆಗೆ ಬಂದ ಸಂದರ್ಭದಲ್ಲಿ ಗೇಟ್ ತಗೆಯಲು ಹೋದಾಗ ವಿದ್ಯುತ್ ತಗುಲಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Home add -Advt

ಮೂಲತಃ ತೇರದಾಳ ಗ್ರಾಮದವರಾದ ಇವರು, ತಾಲೂಕಿನ ಸತ್ತಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರವೀಣಕುಮಾ‌ರ್ ಕುಟುಂಬ ನಿನ್ನೆಯಷ್ಟೇ ವಿವಾಹ ಮಹೋತ್ಸವ ಆಚರಿಸಿಕೊಂಡಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Related Articles

Back to top button