ಪ್ರಗತಿವಾಹಿನಿ ಸುದ್ದಿ, ನಾಗಮಂಗಲ -ನಾಗಮಂಗಲ ತಾಲೂಕಿನ ಅಂಚೆಚಿಟ್ಟನಹಳ್ಳಿ ಗ್ರಾಮದ ಬಳಿ ಘಟನೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಜನರು ಸಾವಿಗೀಡಾಗಿದ್ದಾರೆ.
ಟೆಂಪೋ ಡಿಕ್ಕಿಯ ರಭಸಕ್ಕೆ ಟಾಟಾ ಸುಮೋ ಅರ್ಧ ಭಾಗ ಛಿದ್ರವಾಗಿದ್ದು, 6 ಮಂದಿ ಸ್ಥಳದಲ್ಲೇ ಸಾವಿಗೀಡಾದರು. 10 ಜನರಿಗೆ ಗಂಭೀರ ಗಾಯಗಳಾಗಿವೆ.
ಬಾಕರ್ ಶರೀಫ್ (50), ಮೆಹಬೂಬ್ ಖಾನ್ (47), ನವ್ ಸಾದ್ (45), ಮಕ್ಸೂದ್ (35), ಪಾಯಿರ್ ಪಾಷಾ ಮೃತರು. ಇವರೆಲಲ್ ನಾಗಮಂಗಲ ತಾಲೂಕಿನವರು. ಟೆಂಪೋ ನಾಗಮಂಗಲದ ಸ್ಟಾರ್ ಗ್ರೂಪ್ ಕಂಪನಿಗೆ ಸೇರಿದ್ದು.
ಚಾಲಕರ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಟಾಟಾ ಸುಮೋ ಅರ್ಧ ಭಾಗ ಛಿದ್ರ ಛಿದ್ರವಾಗಿದ್ದು ದೃಶ್ಯ ಭೀಕರವಾಗಿದೆ.
ಘಟನೆಯನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡ 10 ಜನರ ಪೈಕಿ 9 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಗೊತ್ತಾಗಿದೆ.
ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳ್ಳೂರು ಠಾಣಾ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ