Belagavi NewsBelgaum NewsKannada NewsKarnataka NewsLatest
*ಬೆಳಗಾವಿಯಲ್ಲಿ ಜನರನ್ನು ಚದುರಿಸಲು ಲಾಠಿ ಚಾರ್ಜ್*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿಯ ಚನ್ನಮ್ಮ ವೃತ್ತದ ಬಳಿ ಮಂಗಳವಾರ ಮಧ್ಯ ರಾತ್ರಿಯ ನಂತರ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಆರ್ ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆಗೆ ಸೇರಿದ್ದ ಸಹಸ್ರಾರು ಜನರು ಒಂದು ಗಂಟೆಯಾದರೂ ಸ್ಥಳದಿಂದ ಕದಲದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರದ ಮೂಲಕ ಎದುರಿಸಬೇಕಾಯಿತು.

ಈ ವೇಳೆ ಹಲವರು ಕೆಳಕ್ಕೆ ಬಿದ್ದಿದ್ದು, ಕೆಲವರು ಓಡಿ ಲಾಠಿ ಏಟು ತಪ್ಪಿಸಿಕೊಂಡಿದ್ದಾರೆ.
ಚನ್ನಮ್ಮ ವೃತ್ತದ ಬಳಿ ಹಾಕಲಾಗಿದ್ದ ಬಿಗ್ ಸ್ಕ್ರೀನ್ ನಲ್ಲಿ ಪಂದ್ಯ ನೋಡಲು ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ಆರ್ ಸಿಬಿ ಗೆಲ್ಲುತ್ತಿದ್ದಂತೆ ಜನರ ಹರ್ಷೋದ್ಗಾರ, ಕುಣಿತ ಮೇರೆ ಮೀರಿತು. ಬಹಳ ಹೊತ್ತಿನವರೆಗೂ ಇದು ಮುಂದುವರಿದಾಗ ಪೊಲೀಸರು ಲಾಠಿ ಕೈಗೆತ್ತಿಕೊಳ್ಳಬೇಕಾಯಿತು.
ನಿಜವಾಯ್ತು, ಈ ಸಲ ಕಪ್ ನಮ್ದೇ….
18 ವರ್ಷಗಳ ವನವಾಸ ಅಂತ್ಯ: ಚೊಚ್ಚಲ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ ಆರ್ ಸಿಬಿ
https://pragativahini.com/its-true-this-time-the-cup