Belagavi NewsBelgaum NewsKannada NewsKarnataka News

*ಸ್ಮಶಾನ ಭೂಮಿ ಕಬಳಿಸಲು ಯತ್ನಿಸಿದವರ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಕಡೋಲಿ ಗ್ರಾಪಂಗೆ ವ್ಯಾಪ್ತಿಯಲ್ಲಿ ಬರುವ ದೇವಗಿರಿ ಗ್ರಾಮದಲ್ಲಿನ ಲಿಂಗಾಯತ ಸಮಾಜದ ಸ್ಮಶಾನಭೂಮಿಯನ್ನು ಕಬಳಿಸಲು ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿ ದೇವಗಿರಿ ಗ್ರಾಮಸ್ಥರು ಸ್ಮಶಾನಭೂಮಿಯಲ್ಲೇ ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ದೇವಗಿರಿ ಗ್ರಾಮಸ್ಥರು ಮಾತನಾಡಿ, ದೇವಗಿರಿ ಗ್ರಾಮದ ಸರ್ವೇ ನಂ 123/8ರಲ್ಲಿ ಬರುವ 1 ಎಕರೆ 16 ಗುಂಟೆಯ ಭೂಮಿಯನ್ನು ಲಿಂಗಾಯತ ಸಮಾಜದ ಜನರಿಗೆ ಸ್ಮಶಾನಕ್ಕೆ ಮೀಸಲಾಗಿತ್ತು. ಕಳೆದ ಸುಮಾರು ವರ್ಷಗಳಿಂದ ದೇವಗಿರಿ ಗ್ರಾಮದ ಜನರು ಮೃತಪಟ್ಟ ವ್ಯಕ್ತಿಗಳ ಶವ ಸಂಸ್ಕಾರಕ್ಕೆ ಈ ಜಾಗ ಬಳಸಿಕೊಳ್ಳುತ್ತಿದ್ದಾರೆ. ಈ ವರ್ಷ ಸಹ ಇಲ್ಲಿ ಅನೇಕ ಶವಗಳ ಅಂತ್ಯಕ್ರಿಯೆ ಮಾಡಲಾಗಿದೆ. ಈಗ ವ್ಯಕ್ತಿಯೊಬ್ಬ ಈ ಜಾಗ ತನ್ನದೆಂದು ತಕರಾರು ತೆಗೆದು ಅಡಚಣೆ ಉಂಟುಮಾಡಿ ಈ ಸ್ಮಶಾನ ಭೂಮಿಯನ್ನು ಕಬಳಿಸಲು ಯತ್ನ
ಮಾಡುತ್ತಿದ್ದಾನೆ ಎಂದು ಆರೋಪಿಸಿದರು.

ಈ ಜಾಗ ಸ್ಮಶಾನಕ್ಕೆ ಮೀಸಲು ಎಂದು ನಮ್ಮ ಹಿರಿಯರು ಈ ಜಾಗ ಸುಮಾರು ವರ್ಷಗಳ ಹಿಂದೇಯೇ ಗುರುತಿಸಿದ್ದಾರೆ. ಆದರೆ ಈಗ ವ್ಯಕ್ತಿಯೊಬ್ಬ ಈ ಜಾಗ ನನ್ನ ಪಿತ್ರಾರ್ಜಿತ ಆಸ್ತಿ ಎಂದು ಆರೋಪ ಮಾಡಿ ಲಿಂಗಾಯತ ಸಮಾಜದ ಸ್ಮಶಾನ ಭೂಮಿ ಕಬಳಿಸಲು ಯತ್ನ ಮಾಡುತ್ತಿದ್ದಾನೆ. ಇದು ಸರಿಯಲ್ಲ. ಶೀಘ್ರವೇ ಈ ಆರೋಪ ಬಿಟ್ಟು ಲಿಂಗಾಯತ ಸಮುದಾಯದ ಜನರಿಗೆ ಸ್ಮಶಾನ ಭೂಮಿಯನ್ನು ಯತಾವತ್ತಾಗಿ ಮುಂದುವರೆಸಿಕೊಂಡು ಹೋಗಲು ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಸಚಿವರ ಆಪ್ತ ಸಹಾಯಕರ ಮುಂದೆ ಅಳಲು ತೋಡಿಕೊಂಡ ಗ್ರಾಮಸ್ಥರು: ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿಯವರ ಆಪ್ತ ಸಹಾಯಕ ಮಲಗೌಡ ಪಾಟೀಲ್‌ ಅವರ ಬಳಿ ತಮ್ಮ ನೋವು ತೊಡಿಕೊಂಡ ದೇವಗಿರಿ ಗ್ರಾಮಸ್ಥರು, ದೇವಗಿರಿ ವ್ಯಾಪ್ತಿಯ ಕಡೋಲಿ ಗ್ರಾಪಂನ ರಿ.ಸ.ನಂ- 123/8 ರಲ್ಲಿ ಸಂಬಂಧಿಸಿದ ಭೂಮಿಯನ್ನು ಕಳೆದ ಮೂರ್ನಾಲ್ಕೂ ತಲಮಾರಿನಿಂದ ಈ ಭೂಮಿಯನ್ನು ನಾವು ಸ್ಮಶಾನ ಭೂಮಿಯಾಗಿ ಬಳಕೆ ಮಾಡುತ್ತಿದ್ದೇವೆ. ಹೀಗಾಗಿ ಮುಂದೆಯೂ ನಮಗೆ ಈ ಜಾಗವನ್ನು ಬಳಕೆ ಮಾಡಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು. ಈ ಸಮಸ್ಯೆ ಆಲಿಸಿದ ಸಚಿವರ ಆಪ್ತ ಸಹಾಯಕ ಮಲಗೌಡಾ ಪಾಟೀಲ ಅವರು ಗ್ರಾಮಸ್ಥರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು.

Home add -Advt

ಈ ಪ್ರತಿಭಟನೆಯಲ್ಲಿ ಗೌಡಪ್ಪ ಶಿವನಗೌಡ ಪಾಟೀಲ, ಬಾಬುರಾವ ಪಾಟೀಲ, ಬಾಬು ಪಾಟೀಲ, ನಿಂಗಪ್ಪ ಪಾಟೀಲ, ಪಕ್ಕಿರಪ್ಪ ಸದಾವರ, ತಿಪ್ಪಣ್ಣಾ ಪಕ್ಕಿರನಾಯಕ, ಬಾಬು ಬಡಿಗೇರ, ಮಂಜುಳಾ ಅಂಕಿ, ರೇಖಾ ಸುತಾರ ಸೇರಿದಂತೆ ದೇವಗೀರಿ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.

Related Articles

Back to top button