Kannada NewsNational

*ಅಹಮದಾಬಾದ್‌ ವಿಮಾನ ದುರಂತ: ಓರ್ವ ಬಚಾವ್*

ಪ್ರಗತಿವಾಹಿನಿ ಸುದ್ದಿ: ಏರ್ ಇಂಡಿಯಾ ಎಐ-171 ಎಂಬ ಟಾಟಾ ಒಡೆತನಕ್ಕೆ ಸೇರಿದ ವಿಮಾನವು ಅಹಮದಾಬಾದ್‌ ನಿಂದ ಲಂಡನ್ ನತ್ತ ತೆರಳುವ ವೇಳೆ ಐದೆ ನಿಮಿಷಕ್ಕೆ ಪತನವಾಗಿದ್ದು, ವಿಮಾನದಲ್ಲಿದ್ದ 241 ಜನ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಮಾತ್ರ ಪವಾಡ ಸದೃಶ್ಯ ಪಾರಾಗಿದ್ದಾನೆ.

ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗುಜರಾತ್ ನ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ವಿಜಯ್ ರೂಪಾನಿ ಸೇರಿದಂತೆ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ, ಆದರೆ ಎಕನಾಮಿ ವಿಭಾಗದಲ್ಲಿ 11 A ಸೀಟ್ ಮೇಲೆ ಕುಳಿತಿದ್ದ ರಮೇಶ್ ಕುಮಾರ ಎನ್ನುವವರು ಬಚಾವ್ ಆಗಿದ್ದಾರೆ.

ವಿಮಾನ ಟೇಕ್ ಆಫ್ ಆದ 30 ಸೆಕೆಂಡ್ ನಲ್ಲೇ ಪತನವಾಯ್ತು. ನನ್ನ ಸುತ್ತ ಸುಟ್ಟ ಮೃತ ದೇಹ ಬಿದಿದ್ದವು, ನನ್ನನ್ನು ಯಾರೋ ಆಸ್ಪತ್ರೆಗೆ ಸೇರಿಸಿದರು ಎಂದು ಬಚಾವ್ ಆದ ರಮೇಶ್ ತಿಳಿಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button