Kannada NewsKarnataka NewsLatest

*ಅಪ್ಪ ಸೇದಿ ಬಿಸಾಕಿದ ಬೀಡಿ ತುಂಡು ನುಂಗಿದ ಮಗು: ಗಂಟಲಲ್ಲಿ ಸಿಲುಕಿ ಸಾವು*

ಪ್ರಗತಿವಾಹಿನಿ ಸುದ್ದಿ: ಅಪ್ಪ ಸೇದಿ ಬಿಸಾಕಿದ ಬೀಡಿ ತುಂಡು ನುಂಗಿ ಹತ್ತು ತಿಂಗಳ ಮಗು ಸಾವನ್ನಪ್ಪಿರುವ ದಾರುಣ ಘಟನೆ ಮಂಗಳೂರಿನ ಅಡ್ಯಾರುವಿನಲ್ಲಿ ನಡೆದಿದೆ.

ಬಿಹಾರ ಮೂಲದ ದಂಪತಿಯ ಮಗು ಅನೀಶ್ ಮೃತ ಮಗು. ಮನೆಯಲ್ಲಿ ನೆಲದ ಮೇಲೆ ಬಿದ್ದಿದ್ದ ಬೀಡಿ ತುಂಡು ಎತ್ತಿಕೊಂಡಿದ್ದ ಮಗು ಅದನ್ನು ನುಂಗಿದೆ. ಬೀಡಿ ತುಂಡು ಗಂಟಲಲ್ಲಿ ಸಿಲುಕಿ ಮಗು ತೀವ್ರ ಅವಸ್ಥಗೊಂಡಿತ್ತು. ತಕ್ಷಣ ಅಮಗುವನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.

ಪತಿ ಎಷ್ಟೇ ಹೇಳಿದರೂ ಸೇದಿದ ಬೀಡಿಯನ್ನು ಮನೆಯ ಒಳಗೆ ಬಿಸಾಕುತ್ತಿದ್ದರು. ನೆಲದ ಮೇಲೆ ಬಿದ್ದಿದ್ದ ಬೀಡಿ ತುಂಡನ್ನು ಮಗು ಎತ್ತಿಕೊಂಡು ನುಂಗಿದೆ. ಬೀಡಿ ಗಂಟಲಲ್ಲಿ ಸಿಲುಕಿ ಮಗು ಸಾವನ್ನಪ್ಪಿದೆ ಎಂದು ತಾಯಿ ಲಕ್ಷ್ಮೀ ದೇವಿ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಪತಿಯ ವಿರುದ್ಧ ದೂರು ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button