
ಪ್ರಗತಿವಾಹಿನಿ ಸುದ್ದಿ: ಕಿರುತೆಯ ಖ್ಯಾತ ನಟಿಗೆ ಪತಿಯೇ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಮುನೇಶ್ವರ ಲೇಔಟ್ ನಲ್ಲಿ ನಡೆದಿದೆ.
ಮಂಜುಳಾ ಅಲಿಯಾಸ್ ಶೃತಿ ಚಾಕು ಇರಿತಕ್ಕೊಳಗಾದ ನಟಿ. ಅಮರೇಶ್ವರ್ ಪತ್ನಿಗೆ ಚಾಕು ಇರಿದ ಪತಿ. ಮಂಜುಳಾ ಅಲಿಯಾಸ್ ಶೃತಿ ಹಾಗೂ ಅಮರೇಶ್ 20 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದಾಗ್ಯೂ ಪತಿ-ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು.
ಅಲ್ಲದೇ ಕೆಲ ದಿನಗಳಿಂದ ಅಮರೇಶ್ ಪತ್ನಿ ವಿರುದ್ಧ್ ಐಲ್ಲಸಲ್ಲದ ಆರೋಪ ಮಾಡಿ ಗಲಾಟೆ ಮಾಡುತ್ತಿದ್ದ. ಇದರಿಂದ ಮನನೊಂದ ಮಂಜುಳಾ ಕಳೆದ ಏಪ್ರಿಲ್ ನಿಂದ ಅಮೇರ್ ನಿಂದ ದೂರವಿದ್ದರು. ಪತ್ನಿ ದೂವಾಗುತ್ತಿದಂತೆ ಮತ್ತೆ ಆಕೆಯ ಬಳಿ ಹೋಗಿ ಸಂಧಾನದ ಮಾತುಕತೆ ಮೂಲಕ ವಾಪಸ್ ಕರೆದುಕೊಂಡು ಬಂದಿದ್ದ. ಕೆಲ ದಿನಗಳಿಂದ ಚನ್ನಾಗಿಯೇ ಇದ್ದ ಸಂಸಾರದಲ್ಲಿ ಮತ್ತೆ ಜಗಳ ಆರಂಭವಾಗಿದೆ. ಪತಿ ಅಮರೇಶ್ ಮಂಜುಳಾ ಶೀಲ ಶಂಕಿಸಿ ಗಲಾಟೆ ಆರಂಭಿಸಿದ್ದ. ಇದೀಗ ಇದೇ ಕಾರಣಕ್ಕೆ ಮಂಜುಳಾ ಅವರಿಗೆ ಚಾಕು ಇರಿದಿದ್ದು, ಗಂಭೀರವಾಗಿ ಹಲ್ಲೆಗೊಳಗಾಗಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.