Karnataka NewsPolitics

*ವಿಧಾನ ಪರಿಷತ್ ಮಾಜಿ ಸಭಾಪತಿ ವಿಧಿವಶ*

ಪ್ರಗತಿವಾಹಿನಿ ಸುದ್ದಿ: ವಿಧಾನ ಪರಿಷತ್ ಮಾಜಿ ಸಭಾಪತಿ, ಅಖಿಲಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಎನ್ ತಿಪ್ಪಣ್ಣ ಅವರು ಶುಕ್ರವಾರ ಬೆಳಗಿನ ಜಾವ ಇಹಲೋಕ ತ್ಯಜಸಿದ್ದಾರೆ.

ವಯೋಸಹಜದಿಂದ ಕೆಲವು ದಿನಗಳಿಂದ ಬಳಲುತ್ತಿದ್ದರು ಬಳ್ಳಾರಿಯ ನಿವಾಸದಲ್ಲಿ ಬೆಳಗಿನ ಜಾವ ಸಾವನ್ನಪ್ಪಿದರು. ಮೃತರಿಗೆ 96 ವರ್ಷ ವಯಸ್ಸಾಗಿತ್ತು .

ಶುಕ್ರವಾರ ಬಳ್ಳಾರಿಯಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಅವರ ಸ್ವಂತ ಊರಾದ ಚಿತ್ರದುರ್ಗದ ತುರುವನೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಮಹಾಸಭೆಯ ಮಾಜಿ ರಾಜ್ಯಾಧ್ಯಕ್ಷ ಎನ್. ತಿಪ್ಪಣ್ಣ ಅವರಿಗೆ ನಿಧನಕ್ಕೆ ಡಾ.ಪ್ರಭಾಕರ ಕೋರೆ ಶೋಕ

Home add -Advt

ಮಾಜಿ ವಿಧಾನ ಪರಿಷತ್ ಸದಸ್ಯರು, ವಿಧಾನ ಪರಿಷತ್ ಸಭಾಧ್ಯಕ್ಷರು, ಮಾಜಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರಾಗಿದ್ದ ಡಾ.ಎನ್.ತಿಪ್ಪಣ್ಣನವರ (97) ಅಗಲಿಕೆ ಸಮಾಜಕ್ಕೆ ತುಂಬಲಾರದ ದುಃಖವನ್ನುಂಟುಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟಿçÃಯ ಉಪಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಶೋಕ ವ್ಯಕ್ತಪಡಿಸಿದ್ದಾರೆ.
ಎನ್.ತಿಪ್ಪಣ್ಣ ಅವರು ಸಮಾಜದ ವಿವಿಧ ಹುದ್ದೆಗಳನ್ನು ಅಲಂಕರಿಸಿ ಬಸವಣ್ಣವರ ನಿಜವಾದ ಅನುಯಾಯಿಗಳಾಗಿ, ಶರಣ ತತ್ವ ನಿಜವಾದ ಪ್ರತಿಪಾಧಕರಾಗಿದ್ದರು.  ದೂರದೃಷ್ಟಿಯಿಂದ ವೀರಶೈವ ಲಿಂಗಾಯತ  ಸಮಾಜಕ್ಕೆ ತಮ್ಮ ಶಕ್ತಿ ಮೀರಿ ಶ್ರಮಿಸಿದರು. ಇಳಿ ವಯಸ್ಸಿನಲ್ಲಿಯೂ ಅವರ ಸಮಾಜದ ಬಗ್ಗೆ ಹೊಂದಿದ್ದ ಕಳಕಳಿ ಕಾಳಜಿಗಳು ಅಪಾರವಾಗಿತ್ತು. ಮುತ್ಸದ್ದಿ ರಾಜಕಾರಣಿಯೂ ಆಗಿದ್ದ ಅವರು ಇಂದಿನ ಯುವಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ. ಅವರು  ಲಿಂಗೈಕ್ಯರಾಗಿರುವುದು ಸಮಸ್ತ ನಾಡಿಗೆ ಹಾಗೂ  ಸಮಾಜಕ್ಕೆ ತುಂಬಲಾರದನಷ್ಟವುAಟು ಮಾಡಿದೆ ಎಂದು ಡಾ.ಕೋರೆಯವರು ದುಃಖ ವ್ಯಕ್ತಪಡಿಸಿದ್ದಾರೆ.


ಬೆಳಗಾವಿಯ ಮಹಾಸಭೆಯಲ್ಲಿ ಶ್ರದ್ಧಾಂಜಲಿ: ಬೆಳಗಾವಿ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷತೆ ಶ್ರೀಮತಿ ರತ್ನಪ್ರಭಾ ಬೆಲ್ಲದ ಅವರು ಮಹಾಸಭೆಯಲ್ಲಿ ಶ್ರದ್ಧಾಂಜಲಿಯನ್ನು ಹಮ್ಮಿಕೊಂಡು, ಅಪ್ಪಟ್ಟ ಬಸವ ಅನುಯಾಯಿಗಳಾಗಿದ್ದ ತಿಪ್ಪಣ್ಣನವರು ಮಹಾಸಭೆಯನ್ನು ಕ್ರಿಯಾಶೀಲವಾಗಿ ಹಾಗೂ ರಚನಾತ್ಮಕವಾಗಿ ಕಟ್ಟಿಬೆಳೆಸಿದರು. ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ ಮಹಾಸಭೆಯ ಧ್ಯೇಯೋದ್ದೇಶಗಳನ್ನು ಅನುಷ್ಠಾನಕ್ಕೆ ತಂದರು. ಅವರ ಪಾದರಸದ ವ್ಯಕ್ತಿತ್ವದಿಂದ ಮಹಾಸಭೆಯು ನಾಡಿನಾದ್ಯಂತ ಅನೇಕ ಸಮಾಜಮುಖಿ ಕೆಲಸಗಳನ್ನು ಕೈಗೊಂಡಿದ್ದು ಸರ್ವವಿಧಿತ. ಅವರ ಅಗಲಿಕೆ ವೀರಶೈವ ಲಿಂಗಾಯತ ಸಮಾಜವನ್ನು ಬಡವಾಗಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾಸಭೆಯ ಸಮಸ್ತ ಪದಾಧಿಕಾರಿಗಳು ಎನ್.ತಿಪ್ಪಣ್ಣನವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸಿತು. ಸೃಷ್ಟಿಕರ್ತ ಭಗವಂತನು ಅವರ ದಿವ್ಯಾತ್ಮಕ್ಕೆ ಶಾಂತಿಯನ್ನು ಕರುಣಿಸಲೆಂದು, ಅವರ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ನೀಡಲೆಂದು ಪ್ರಾರ್ಥಿಸಿದರು.

Related Articles

Back to top button